ಬೆಂಗಳೂರು: ಜೈನರ ’ಪರ್ಯುಷನ ಪರ್ವ’ದ ವೇಳೆ ಮಾಂಸ ನಿಷೇಧ ಮಾಡಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ಮುಸ್ಲಿಮರ ಹಬ್ಬದ ವೇಳೆ ತರಕಾರಿಗಳನ್ನು ನಿಷೇಧಿಸಬೇಕು ಎಂದು ಆಂದೋಲನ ಆರಂಭಿಸಿದ್ದಾನೆ.
ಬೆಂಗಳೂರಿನ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಫಲಹ್ ಫೈಜಲ್ ಎಂಬಾತ ಪಿಟಿಷನ್ ಆರಂಭಿಸಿದ್ದಾನೆ.
ಜೈನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಮಾಂಸ ನಿಷೇಧಿಸಲಾಗಿದೆ, ಅದೇರೀತಿ ಮುಸ್ಲಿಂ ಭಾವನೆಗಳಿಗೆ ಗೌರವ ಕೊಟ್ಟು ಬಕ್ರೀದ್ ವೇಳೆ ತರಕಾರಿ ನಿಷೇಧಿಸಿ ಎಂದಿದ್ದಾನೆ ಈತ.
‘ಪ್ರವಾದಿ ಮೊಹಮ್ಮದರು ತಮ್ಮ ಮಗನನ್ನೆ ಬಲಿಕೊಟ್ಟರು. ಹಾಗಾಗೀ ನಾವು ತರಕಾರಿಗಳನ್ನು ಒಂದು ದಿನದ ಮಟ್ಟಿಗೆ ತಿನ್ನುವುದನ್ನು ಬಿಡಬೇಕು ಎಂದು ನಂಬಿದ್ದೇನೆ’ ಎಂದಿದ್ದಾನೆ.
ರಂಝಾನ್ ಉಪವಾಸದ ವೇಳೆಯೂ ತರಕಾರಿಗೆ ನಿಷೇಧ ಹೇರಬೇಕು ಎಂದಿದ್ದಾನೆ. ಇದು ಸಾಧ್ಯವಾಗದೇ ಹೋದರೆ ಕನಿಷ್ಠಪಕ್ಷ ಎಲ್ಲರೂ ಜಾತಿ ಧರ್ಮವನ್ನು ಮೀರಿ ಬಕ್ರೀದ್ ವೇಳೆ ಮಟನ್ ಬಿರಿಯಾನಿ ತಿನ್ನುವುದನ್ನು ಖಡ್ಡಾಯಗೊಳಿಸಬೇಕು ಎಂಬುದು ಈತನ ಆಗ್ರಹ.
ಈತನ ಪಿಟಿಷನ್ಗೆ ಇದುವರೆಗೆ 500 ಬೆಂಬಲಿಗರು ಸಿಕ್ಕಿದ್ದಾರೆ, ಆದರೂ ನಿಗದಿತ ಗುರಿಗೆ ಇನ್ನೂ ೪೯೦ ಮಂದಿಯ ಅಗತ್ಯ ಈತನಿಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.