ನವದೆಹಲಿ: ಮುಂದಿನ ಐದರಿಂದ ಆರು ತಿಂಗಳಲ್ಲಿ ‘ಪಿಎಂ-ಇ ಬಸ್ ಸೇವಾ’ ಅಡಿಯಲ್ಲಿ 169 ನಗರಗಳಿಗೆ 10,000 ಎಲೆಕ್ಟ್ರಿಕ್-ಬಸ್ಗಳನ್ನು (ಇ-ಬಸ್ಗಳು) ಒದಗಿಸಲು ಸರ್ಕಾರ ಮುಂದಾಗಿದ್ದು, ಇದರಿಂದ ಸುಧಾರಿತ ಕೊನೆಯ ಮೈಲಿ ಸಂಪರ್ಕವನ್ನು ಸಾಧಿಸಿದಂತಾಗುತ್ತದ . ಈ ಯೋಜನೆಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ಅನುಷ್ಠಾನಕ್ಕೆ ಬರಲಿದೆ.
2014 ರಿಂದ ‘ನಗರ ಪರಿವರ್ತನೆ’ಗಾಗಿ ಮಾಡಿದ ಪ್ರಯತ್ನಗಳ ಕುರಿತು ಮಾತನಾಡಿದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಹರ್ದೀಪ್ ಸಿಂಗ್ ಪುರಿ, ಸಿಟಿ ಬಸ್ ಕಾರ್ಯಾಚರಣೆಗಳನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರವು ಈ ಯೋಜನೆಯಡಿಯಲ್ಲಿ ಹವಾನಿಯಂತ್ರಿತ ಬಸ್ಗಳನ್ನು ಶೀಘ್ರದಲ್ಲೇ ಖರೀದಿಸಲಿದೆ. ಕೇಂದ್ರ ಸಚಿವ ಸಂಪುಟ ಇದಕ್ಕೆ ಇತ್ತೀಚಿಗೆ ಅನುಮೋದನೆಯನ್ನು ನೀಡಿದೆ ಎಂದಿದ್ದಾರೆ.
ಸಚಿವಾಲಯದ ಕಾರ್ಯದರ್ಶಿ ಮನೋಜ್ ಜೋಶಿ ಮಾತನಾಡಿ, ರಾಜ್ಯ ಸರ್ಕಾರಗಳು ತಮ್ಮ ಪ್ರಸ್ತಾವನೆಗಳನ್ನು ಸೆಪ್ಟೆಂಬರ್ 30 ರೊಳಗೆ ಸಲ್ಲಿಸಬೇಕಾಗಿದೆ, ಇದಕ್ಕಾಗಿ ಈಗಾಗಲೇ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ಎಲೆಕ್ಟ್ರಿಕ್ ಬಸ್ಗಳಲ್ಲಿ ಪ್ರಯಾಣಿಸುವುದು ಮೆಟ್ರೋ ತರಹದ ಅನುಭವ ನೀಡಲಿದೆ. ಇ-ಬಸ್ಗಳ ಟಿಕೆಟ್ಗಳು ಸ್ವಯಂಚಾಲಿತ ದರ ವ್ಯವಸ್ಥೆಯ ಮೂಲಕ ಲಭ್ಯವಿರುತ್ತವೆ ಎಂದು ಅವರು ವಿವರಿಸಿದರು.
ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಸೇವಾ ಪೂರೈಕೆದಾರರನ್ನು ಒಳಗೊಂಡಿರುತ್ತದೆ. ಈ ಬಸ್ಗಳನ್ನು ಓಡಿಸುವ ನಿರ್ವಾಹಕರಿಗೆ ಪ್ರತಿ ಕಿಲೋಮೀಟರ್ಗೆ 20-40 ರೂ ನೀಡಲಾಗುತ್ತದೆ. ಹಸಿರು ಚಲನಶೀಲತೆಯನ್ನು ಹೆಚ್ಚಿಸಲು ಈ ತಿಂಗಳ ಆರಂಭದಲ್ಲಿ ಕೇಂದ್ರ ಸಚಿವ ಸಂಪುಟವು ಈ ಯೋಜನೆಯನ್ನು ಅನುಮೋದಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.