ಬೆಂಗಳೂರು: ಎಲ್ಲಾ ಅಡೆತಡೆಗಳನ್ನು ಮೀರಿ ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಮಿಷನ್ ಯಶಸ್ಸನ್ನು ಕಂಡು ಜಗತ್ತನ್ನು ನಿಬ್ಬೆರಗಾಗಿಸಿದೆ. ಪ್ರಸ್ತುತ ರೋವರ್ ಪ್ರಜ್ಞಾನ್ ಚಂದ್ರನ ಮೇಲೆ ಸ್ವಚ್ಛಂದವಾಗಿ ವಿಹರಿಸುತ್ತಾ ಮಾಹಿತಿಗಳನ್ನು ಇಸ್ರೋಗೆ ಕಳುಹಿಸಿಕೊಡುತ್ತಿದೆ. ಆದರೆ ಪ್ರಜ್ಞಾನ್ಗೂ ಕೂಡ ತಡೆಯೊಂದು ಎದುರಾಗಿತ್ತು ಎಂಬ ಮಾಹಿತಿಯನ್ನು ಇಸ್ರೋ ಬಹಿರಂಗಪಡಿಸಿದೆ.
ಚಂದ್ರನ ಮೇಲೆ ತನ್ನ ಪರಿಶೋಧನೆಯಲ್ಲಿ ತೊಡಗಿರುವ ಪ್ರಗ್ಯಾನ್ ರೋವರ್ಗೆ ದೊಡ್ಡ ಕುಳಿಯೊಂದು ಎದುರಾಗಿದೆ ಎಂದು ಇಸ್ರೋ ತಿಳಿಸಿದೆ.
‘ಆಗಸ್ಟ್ 27 ರಂದು ರೋವರ್ ತಾನಿದ್ದ ಸ್ಥಳದಿಂದ ಕೇವಲ ಮೂರು ಮೀಟರ್ ದೂರದಲ್ಲಿ ದೊಡ್ಡ ಕುಳಿಯನ್ನು ಗಮನಿಸಿದೆ. ಅಂದಾಜು 4 ಮೀಟರ್ ಸುತ್ತಳತೆಯ ಕುಳಿ ಇದಾಗಿತ್ತು. ಆ ಬಳಿಕ ರೋವರ್ಗೆ ತನ್ನ ಮಾರ್ಗವನ್ನು ಬದಲಾವಣೆ ಮಾಡುವಂತೆ ಕಮಾಂಡ್ ಮಾಡಲಾಗಿದೆ. ಈಗ ರೋವರ್ ಹೊಸ ಮಾರ್ಗದಲ್ಲಿ ಪ್ರಯಾಣ ಮಾಡುತ್ತಿದೆ’ ಎಂದು ಇಸ್ರೋ ಟ್ವೀಟ್ ಮಾಡಿದೆ.
ಸೋಮವಾರ ಭಾರತೀಯ ಬಾಹ್ಯಾಕಾಶ ಸಂಸ್ಥೆ, ವಿಕ್ರಮ್ ಲ್ಯಾಂಡರ್ನ ನ್ಯಾವಿಗೇಷನ್ ಕ್ಯಾಮೆರಾದಿಂದ ಸೆರೆಹಿಡಿದ ಆ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
Chandrayaan-3 Mission:
On August 27, 2023, the Rover came across a 4-meter diameter crater positioned 3 meters ahead of its location.
The Rover was commanded to retrace the path.It’s now safely heading on a new path.#Chandrayaan_3#Ch3 pic.twitter.com/QfOmqDYvSF
— ISRO (@isro) August 28, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.