ನವದೆಹಲಿ: ಭಾರತದ ಸ್ಟಾರ್ ಓಟಗಾರ್ತಿ ದ್ಯುತಿ ಚಂದ್ ಅವರು ಸ್ಪರ್ಧೆಯ ಹೊರಗೆ ಡೋಪ್ ಪರೀಕ್ಷೆಯಲ್ಲಿ ವಿಫಲವಾದ ಕಾರಣ ನಾಲ್ಕು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದಾರೆ.
2021 ರ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ 4 ರ ಸಮಯದಲ್ಲಿ 11.17 ಸೆಕೆಂಡ್ಗಳಲ್ಲಿ 100 ಮೀ ಓಡಿ ದ್ಯುತಿ ನೂತನ ದಾಖಲೆ ನಿರ್ಮಿಸಿದ್ದರು.
ದ್ಯುತಿ ಅವರ ಮೂತ್ರದ ಮಾದರಿಯ ವರದಿಯು ಪಾಸಿಟಿವ್ ಬಂದಿದ್ದು, ನಿಷೇಧಿತ ಪದಾರ್ಥಗಳನ್ನು ಸೇವಿಸಿರುವುದು ಸಾಬೀತಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ದ್ಯುತಿ ಚಂದ್ರನ್ನು ಅಮಾನತುಗೊಳಿಸಿದ್ದರಿಂದ ಈಗ ಅವರ ವೃತ್ತಿ ಬದುಕಿನ ಮೇಲೆ ದೊಡ್ಡ ಹೊಡೆತಬಿದ್ದಿದೆ
ಆಕೆಯ ಮೂತ್ರದ ಮಾದರಿಗಳನ್ನು ಪರಿಶೀಲಿಸಿದಾಗ, ಅಧಿಕಾರಿಗಳು SARS S4 ಆಂಡರಿನ್, O Dephenylandarine, SARMS (ENBOSARM) (OSTARINE) ಮತ್ತು LIGANDROL ಮೆಟಾಬೊಲೈಟ್ ಅನ್ನು ಪತ್ತೆ ಹಚ್ಚಿದ್ದಾರೆ.
ದ್ಯುತಿ ಚಂದ್ ನಿಷೇಧವು ಜನವರಿ 3, 2023 ರಿಂದ ಪ್ರಾರಂಭವಾಗುತ್ತದೆ. ಜೊತೆಗೆ ಡಿಸೆಂಬರ್ 5, 2022 ಬಳಿಕದ ಇವರ ಎಲ್ಲಾ ಸ್ಪರ್ಧಾತ್ಮಕ ಫಲಿತಾಂಶಗಳನ್ನು ಅನರ್ಹಗೊಳಿಸಲಾಗುತ್ತದೆ ಮತ್ತು ವರದಿಯ ಪ್ರಕಾರ ದ್ಯುತಿ ಪಡೆದುಕೊಂಡಿರುವ ಎಲ್ಲ ಪದಕಗಳು, ಅಂಕಗಳು ಮತ್ತು ಬಹುಮಾನಗಳನ್ನು ಕಳೆದುಕೊಳ್ಳುತ್ತಾರೆ.
ಅವರು ಏಷ್ಯನ್ ಗೇಮ್ಸ್ ಪದಕ ವಿಜೇತೆ, ಈವೆಂಟ್ನ 2018 ಆವೃತ್ತಿಯಲ್ಲಿ 100 ಮೀ ಮತ್ತು 200 ಮೀ ಸ್ಪರ್ಧೆಗಳಲ್ಲಿ ಬೆಳ್ಳಿಯನ್ನು ಗೆದ್ದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.