ನವದೆಹಲಿ: ಮುಂದಿನ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ ಎಂಬ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಎಐಎಡಿಎಂಕೆ ನಾಯಕ ಎಂ ತಂಬಿದುರೈ, ಇಡೀ ಭಾರತವೇ ಪ್ರಧಾನಿಯ ಮನೆಯಾಗಿದ್ದು, ಮುಂದಿ ವರ್ಷವೂ ಅವರು ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸುವುದು ಖಚಿತ ಎಂದು ಹೇಳಿದ್ದಾರೆ.
ಕೇಂದ್ರದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎನ್ಡಿಎ) ಪಾಲುದಾರರಾಗಿರುವ ಎಐಎಡಿಎಂಕೆ ಬುಧವಾರ ಸುದ್ದಿ ಮಾಧ್ಯಮಗಳ ಜೊತೆ ಮಾತನಾಡಿ, ಇಡೀ ಭಾರತವೇ ಪ್ರಧಾನಿ ಮೋದಿ ಅವರ ಮನೆ, ಅವರಿಗೆ ಅವರದ್ದೇ ಸ್ವಂತ ಕುಟುಂಬವಿಲ್ಲ. ಆದ್ದರಿಂದ, ಸಹ ದೇಶವಾಸಿಗಳನ್ನು ಕುಟುಂಬದ ಸದಸ್ಯರು ಎಂದು ಅವರು ಪರಿಗಣಿಸುತ್ತಾರೆ. ಮುಂದಿನ ವರ್ಷವೂ ಅವರು ರಾಷ್ಟ್ರಧ್ವಜವನ್ನು ಹಾರಿಸಲು ಸಾಧ್ಯವಿರುವ ಏಕೈಕ ಸ್ಥಳ ಕೆಂಪು ಕೋಟೆ. ಖರ್ಗೆ ಅವರ ಸ್ವಂತ ಕುಟುಂಬ ಇರಬಹುದು ಆದರೆ ಪ್ರಧಾನಿ ಮೋದಿ ಅವರಿಗೆ ಇಡೀ ದೇಶವೇ ಅವರ ಮನೆ ಮತ್ತು ಕುಟುಂಬ, ಹಾಗಾಗಿ ಖರ್ಗೆಯವರು ಹೇಳಿದ್ದು ಸರಿ. ಕೆಂಪುಕೋಟೆ ಅವರ ಮನೆ ಮತ್ತು ಮುಂದಿನ ವರ್ಷವೂ ಅವರ ಮನೆಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ.
ಆಗಸ್ಟ್ 15ರಂದು ಕೆಂಪು ಕೋಟೆಯ ಆವರಣದಿಂದ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ಮುಂದಿನ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಲ್ಲಿ ದೇಶವು ಸಾಧಿಸಿದ ದಾಪುಗಾಲುಗಳನ್ನು ಪ್ರದರ್ಶಿಸುತ್ತೇನೆ ಎಂದು ಮೋದಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಮೋದಿ ಮುಂದಿನ ವರ್ಷವೂ ಮತ್ತೊಮ್ಮೆ ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ ಆದರೆ ಅವರ ಮನೆಯಲ್ಲಿ ಎಂದು ವ್ಯಂಗ್ಯವಾಡಿದ್ದರು.
ಮಾಜಿ ಪ್ರಧಾನಿ ಅವರ ಐದನೇ ಪುಣ್ಯತಿಥಿಯಂದು ಅವರಿಗೆ ಪುಷ್ಪ ನಮನ ಸಲ್ಲಿಸಲು ತಂಬಿದುರೈ ಅವರು ರಾಷ್ಟ್ರ ರಾಜಧಾನಿಯ ‘ಸದೈವ್ ಅಟಲ್’ ಸ್ಮಾರಕಕ್ಕೆ ಆಗಮಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.