ಗುರುಗ್ರಾಮ್: ಹರಿಯಾಣದ ಕೆಲವು ಭಾಗಗಳಲ್ಲಿ ಕೋಮು ಹಿಂಸಾಚಾರ ನಡೆದು ದೊಡ್ಡ ಮಟ್ಟದ ನಷ್ಟಗಳು ಸಂಭವಿಸಿದ್ದವು, ಈ ನಡುವೆ ಹರಿಯಾಣದ ಮಹೇಂದರ್ಗಢ್, ರೇವಾರಿ ಮತ್ತು ಜಜ್ಜರ್ ಜಿಲ್ಲೆಗಳ ಸುಮಾರು 50 ಪಂಚಾಯತುಗಳ ಮುಖ್ಯಸ್ಥರು ತಮ್ಮ ಗ್ರಾಮಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಿದ್ದಾರೆ.
ಪಂಚಾಯತ್ ಮುಖ್ಯಸ್ಥರ ಪತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ, ಪತ್ರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಲಾಗಿದೆ. ಜುಲೈ 31 ರಂದು ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯ ಮೇಲೆ ಗುಂಪೊಂದು ದಾಳಿ ಮಾಡಿ ನುಹ್ ಜಿಲ್ಲೆಯಲ್ಲಿ ಹಿಂಸಾಚಾರವನ್ನು ನಡೆಸಿದ ಘಟನೆಯನ್ನು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ನುಹ್ನಲ್ಲಿನ ಹಿಂಸಾಚಾರವು ಇಬ್ಬರು ಹೋಮ್ ಗಾರ್ಡ್ಗಳು ಸೇರಿದಂತೆ ಐದು ಜನರನ್ನು ಬಲಿ ತೆಗೆದುಕೊಂಡಿತು ಮತ್ತು ಹಿಂಸಾಚಾರವು ಹರಡುತ್ತಿದ್ದಂತೆ ನೆರೆಯ ಗುರುಗ್ರಾಮ್ನ ಮಸೀದಿಯ ಮೇಲೆ ನಡೆದ ದಾಳಿಯಲ್ಲಿ ಒಬ್ಬ ಧರ್ಮಗುರು ಕೊಲ್ಲಲ್ಪಟ್ಟಿದ್ದಾನೆ
ಆನ್ಲೈನ್ನಲ್ಲಿ ಪತ್ರಗಳನ್ನು ಗಮನಿಸಿದ್ದೇವೆ ಮತ್ತು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕೆಲವು ಗ್ರಾಮಗಳ ಸರಪಂಚ್ಗಳು ತಮ್ಮ ಹಳ್ಳಿಗಳಲ್ಲಿ ಯಾವುದೇ ವ್ಯಾಪಾರ ಮಾಡಲು ಮುಸ್ಲಿಂ ಸಮುದಾಯಕ್ಕೆ ಮತ್ತು ತೊಂದರೆ ಕೊಡುವವರಿಗೆ ಅವಕಾಶ ನೀಡದಿರಲು ನಿರ್ಧರಿಸಿದ್ದೇವೆ ಎಂದು ಪತ್ರದಲ್ಲಿ ಹೇಳಿದ್ದಾರೆ. ವ್ಯಾಪಾರಿಗಳು, ದನದ ವ್ಯಾಪಾರಿಗಳು ಮತ್ತು ಭಿಕ್ಷುಕರ ಬಗ್ಗೆಯೂ ಇದರಲ್ಲಿ ಉಲ್ಲೇಖಿಸಲಾಗಿದೆ.
Big news: 50 Panchayats of Haryana have decided to boycott MusIim business men/employees, they've also demanded a ban on them.
They said “If MusIims see us as kafirs,all they want is to kiII us then why should we give them business”?
How do you see this? I totally support it. pic.twitter.com/yDq3Alh5mV
— Mr Sinha (@MrSinha_) August 9, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.