ತಿರುವನಂತಪುರಂ: ಕೇರಳದಲ್ಲಿ ನಮ್ಮ ಸನಾತನ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಜನಮ್ ಟಿವಿ ಹೊಸ ಉಪಕ್ರಮವನ್ನು ಆರಂಭಿಸಿದೆ. ಅದು ಸಂಸ್ಕೃತದಲ್ಲಿ ಸುದ್ದಿಗಳನ್ನು ತಲುಪಿಸಲು ಪ್ರಾರಂಭಿಸಿದೆ.
ನಟ ಮೋಹನ್ಲಾಲ್ ಅವರು ಜನಮ್ ಟಿವಿಯಲ್ಲಿ ಈ ಘೋಷಣೆ ಮಾಡಿದ್ದಾರೆ. ಸಂಸ್ಕೃತದಲ್ಲೇ ಅವರು ಈ ಘೋಷಣೆ ಮಾಡಿರುವುದು ವಿಶೇಷ. ಅವರ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇರಳದ ಗವರ್ನರ್ ಆರಿಫ್ ಮೊಹಮ್ಮದ್ ಖಾನ್ ಅವರು ಶತಮಾನಗಳ ಕಾಲ ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯ ಉಳಿವಿನ ಹಿಂದೆ ಸಂಸ್ಕೃತದ ಬಂಧಿಸುವ ಶಕ್ತಿ ಇದೆ ಎಂದು ಇತ್ತೀಚಿಗೆ ಹೇಳಿದ್ದರು. ಅದರ ತರುವಾಯ ಜನಮ್ ಮಹತ್ವದ ಉಪಕ್ರಮವನ್ನು ಹೊರತಂದಿದೆ.
ಭಾರತೀಯ ಜ್ಞಾನ ವ್ಯವಸ್ಥೆಯು ಎಲ್ಲಾ ಜೀವಿಗಳ ಸಮಾನತೆಯನ್ನು ಹೇಗೆ ನಂಬುತ್ತದೆ ಎಂಬುದನ್ನು ವಿವರಿಸಲು ಖಾನ್ ಪುರಾಣಗಳನ್ನು ಉಲ್ಲೇಖಿಸಿದ್ದರು. ಅಲ್ಲದೇ ಸಂಸ್ಕೃತವಿಲ್ಲದೆ, ಭಾರತವು ಭಾರತವಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದರು.
Malayalam Tv channel Janam tv will show Samskrit Basha news in their channel. And look who has come to make this announcement, Its Actor Mohanlal…😍🙏
Super efforts by @tvjanam 👏👌 pic.twitter.com/snKUHNhhhz— Adarsh Hegde (@adarshahgd) August 2, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.