ನವದೆಹಲಿ: ವಿಶ್ವಬ್ಯಾಂಕ್ ನಿಯೋಗದ 11 ಕಾರ್ಯನಿರ್ವಾಹಕ ನಿರ್ದೇಶಕರು (ED) ಗುರುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದರು. ವಿಶ್ವದ 95 ಕ್ಕೂ ಹೆಚ್ಚು ದೇಶಗಳನ್ನು ಪ್ರತಿನಿಧಿಸುವ 11 ಕಾರ್ಯನಿರ್ವಾಹಕ ನಿರ್ದೇಶಕರುಗಳು ಕೇಂದ್ರ ಸರ್ಕಾರವು ಜಾರಿಗೊಳಿಸಿದ ವಿವಿಧ ಯೋಜನೆಗಳು ಮತ್ತು ನೀತಿಗಳನ್ನು ಚರ್ಚಿಸಿದರು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
“2047 ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗುವ ಭಾರತದ ಮಹತ್ವಾಕಾಂಕ್ಷೆಯಲ್ಲಿ ಪರಿವರ್ತನಾ ಸುಧಾರಣೆಗಳು ಮತ್ತು ಖಾಸಗಿ ವಲಯದ ಭಾಗವಹಿಸುವಿಕೆಯಿಂದ ಸಕ್ರಿಯಗೊಳಿಸಲಾದ ಎಲ್ಲಾ ವಲಯಗಳ ವೇಗದ ಅಭಿವೃದ್ಧಿಯನ್ನು ಅವರು ಶ್ಲಾಘಿಸಿದ್ದಾರೆ” ಎಂದು ಹಣಕಾಸು ಸಚಿವಾಲಯ ಟ್ವೀಟ್ನಲ್ಲಿ ತಿಳಿಸಿದೆ.
ನೀರು, ವಿದ್ಯುತ್, ರಸ್ತೆ ಮೂಲಸೌಕರ್ಯ ಸೇರಿದಂತೆ ಸಾರ್ವಜನಿಕ ಸರಕುಗಳ ವಿತರಣೆಯನ್ನು ಕೇಂದ್ರೀಕರಿಸಿ ಡಿಜಿಟಲ್ ತಂತ್ರಜ್ಞಾನ ಮತ್ತು ಸ್ಟಾರ್ಟ್ಅಪ್ಗಳಂತಹ ವಿವಿಧ ರಂಗಗಳಲ್ಲಿ ಭಾರತ ಸಾಧಿಸಿದ ಯಶಸ್ಸನ್ನು ಅವರು ಶ್ಲಾಘಿಸಿದ್ದಾರೆ ಎಂದಿದೆ.
ಮತ್ತೊಂದೆಡೆ, ಸಮಾನತೆಯ ಬೆಳವಣಿಗೆಗಾಗಿ ಸಮುದಾಯಗಳನ್ನು ಸಬಲೀಕರಣಗೊಳಿಸುವ ಮೂಲಕ ಬಡವರಿಗೆ ಅವಕಾಶಗಳನ್ನು ಸೃಷ್ಟಿಸಲು ಭಾರತವು ಗಮನಹರಿಸುತ್ತಿದೆ ಎಂದು ವಿತ್ತ ಸಚಿವರು ಒತ್ತಿ ಹೇಳಿದರು ಮತ್ತು 2014 ರಿಂದ ಭಾರತದಲ್ಲಿ ತಂದ ಸುಧಾರಣೆಗಳು ಭಾರತದಲ್ಲಿ ಯೋಜನೆಗಳ ವಿಕೇಂದ್ರೀಕರಣವನ್ನು ಸಕ್ರಿಯಗೊಳಿಸಿವೆ ಎಂದು ಹೇಳಿದರು.
Eleven Executive Directors (EDs) of World Bank Group @WorldBank , representing 95 countries, called on Union Finance Minister Smt. @nsitharaman, in New Delhi, today, while on their visit to India.
The EDs @WorldBank shared their key takeaways with FM Smt. @nsitharaman after… pic.twitter.com/V6pxkDBu1F
— Ministry of Finance (@FinMinIndia) August 3, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.