ನವದೆಹಲಿ: ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿ ದೊಡ್ಡ ಕೃಷಿ ರಾಸಾಯನಿಕಗಳನ್ನು ರಫ್ತು ಮಾಡುವ ದೇಶವಾಗಿದೆ. ಇತ್ತೀಚಿನ WTO ಡೇಟಾ ಪ್ರಕಾರ, ಹತ್ತು ವರ್ಷಗಳ ಹಿಂದೆ ಭಾರತವು ಆರನೇ ಸ್ಥಾನದಲ್ಲಿ ಇತ್ತು.
ಉದ್ಯಮದ ವಿಶ್ಲೇಷಕರ ಪ್ರಕಾರ, ಇದು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಸ್ಥಳೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಪೇಟೆಂಟ್ ನಂತರದ ವಸ್ತುಗಳನ್ನು ತ್ವರಿತವಾಗಿ ನೀಡಲು ಭಾರತೀಯ ಉದ್ಯಮದ ವಿಶಿಷ್ಟ ತಾಂತ್ರಿಕ ಸಾಮರ್ಥ್ಯದಿಂದಾಗಿ ಅದ್ಭುತ ದಾಖಲೆಯ ರಫ್ತು ನಡೆದಿದೆ ಎಂದು ಅಂದಾಜಿಸಲಾಗಿದೆ.
ಪ್ರತಿ ವರ್ಷ, ಭಾರತೀಯ ಕೃಷಿರಾಸಾಯನಿಕ ವ್ಯವಹಾರವು ಗಮನಾರ್ಹವಾದ ಹೆಚ್ಚಳ ದಾಖಲಿಸುತ್ತಿದೆ. 2017-18ರಲ್ಲಿ ಇದ್ದ 8,030 ಕೋಟಿ ರೂಗಳಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ 28,908 ಕೋಟಿ ರೂಪಾಯಿಗೆ ತಲುಪಿದೆ.
ಯುನೈಟೆಡ್ ಸ್ಟೇಟ್ಸ್ ಭಾರತೀಯ ಕೃಷಿ ರಾಸಾಯನಿಕಗಳ ಪ್ರಮುಖ ಖರೀದಿದಾರನಾಗಿದ್ದು, ಬ್ರೆಜಿಲ್ ಮತ್ತು ಜಪಾನ್ ನಂತರದ ಸ್ಥಾನದಲ್ಲಿವೆ. ಇದು ಭಾರತೀಯ ನಿರ್ಮಿತ ಕೃಷಿ ರಾಸಾಯನಿಕಗಳ ಅಸಾಧಾರಣ ಗುಣಮಟ್ಟವನ್ನು ಪ್ರದರ್ಶಿಸುತ್ತದೆ, ಇದನ್ನು ಪ್ರಪಂಚದಾದ್ಯಂತ 140 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಬಳಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.