ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಮತ್ತು ಲೈಂಗಿಕ ದೌರ್ಜನ್ಯದ ವೈರಲ್ ವೀಡಿಯೊ ದೇಶವನ್ನು ಬೆಚ್ಚಿಬೀಳಿಸಿದ ನಂತರ ಕೆಲವರು ತಮ್ಮ ಬೇಳೆ ಬೇಯಿಸುವ ಪ್ರಯತ್ನ ನಡೆಸುತ್ತಿದ್ದಾರೆ. ತಮ್ಮ ರಾಜಕೀಯ ಅಜೆಂಡಾವನ್ನು ಹರಡುವ ಉದ್ದೇಶದಿಂದ ಹಲವಾರು ಸಳ್ಳು ನಿರೂಪಣೆಗಳನ್ನು ಹರಡಲಾಗುತ್ತಿದೆ. ಈ ನಡುವೆ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಮಣಿಪುರ ಹಿಂಸಾಚಾರಕ್ಕೆ ಎಳೆದು ತಂದಿದ್ದಾರೆ.
ಎಡಪಂಥೀಯರು “ನನ್ನ ದೇಶ ಎಚ್ಚರಗೊಳ್ಳಲಿ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ನಲ್ಲಿ, ಬೆತ್ತಲೆ ಮಹಿಳೆಯನ್ನು ಕೆಂಪು ಶಿಲುಬೆಯಲ್ಲಿ ನೇಣು ಹಾಕಿರುವುದನ್ನು ನೋಡಬಹುದು, ಚಿತ್ರದಲ್ಲಿ ಮಹಿಳೆಯನ್ನು ಶಿಲುಬೆಗೇರಿಸಿದಂತೆ ತೋರುತ್ತದೆ. ಅವಳ ಮುಂದೆ ಒಬ್ಬ ಸಮವಸ್ತ್ರಧಾರಿ ಆರ್ಎಸ್ಎಸ್ ನಾಯಕ ನಿಂತಿರುವಂತೆ ಮತ್ತು ಕೈಯಲ್ಲಿ ದಂಡವನ್ನು ಹೊಂದಿರುವಂತೆ ಚಿತ್ರಿಸಲಾಗಿದೆ. “ಹಿಂದೂ ರಾಷ್ಟ್ರ: ಎ ಬಾಟಮ್ಲೆಸ್ ಪಿಟ್ ಆಫ್ ಡಿಪ್ರೆವಿಟಿ, ಸಿಂಕಿಂಗ್ ಲೋವರ್ ಎವೆರಿ ಡೇ” ಎಂದು ಒಕ್ಕಣೆ ಬರೆಯಲಾಗಿದೆ.
ಈ ಪೋಸ್ಟ್ ವೈರಲ್ ಆಗಿದ್ದು, ಮಣಿಪುರದ ಅವ್ಯವಸ್ಥೆಯ ನಡುವೆ ದ್ವೇಷವನ್ನು ಸೃಷ್ಟಿಸುವ ಐಶೆ ಘೋಷ್ ಅವರ ಾಜೆಂಡಾವನ್ನು ಅನೇಕರು ಖಂಡಿಸಿದ್ದಾರೆ. ಮಣಿಪುರ ಹಿಂಸಾಚಾರದಲ್ಲಿ ಆರ್ಎಸ್ಎಸ್ ಅನ್ನು ಎಳೆದು ತರುವುದು ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. ಹಲವಾರು ನೆಟಿಜನ್ಗಳು ಆಕೆಯ ಖಾತೆಯನ್ನು ರಿಪೋರ್ಟ್ ಮಾಡಲು ಮನವಿ ಮಾಡಿದ್ದಾರೆ.
“ಇದರಲ್ಲಿ ಆರ್ಎಸ್ಎಸ್ಗೆ ಸಂಬಂಧವೇನು? ಪಶ್ಚಿಮಬಂಗಾಳ ಅಥವಾ ಕೇರಳ ಅಥವಾ ಇತರ ಸ್ಥಳಗಳಲ್ಲಿ ಸ್ವಯಂಸೇವಕರ ಹತ್ಯೆಗಳನ್ನು ಆನಂದಿಸಿರುವ ನಿಮ್ಮಂತಹ ಜನರಿಗಿಂತ ಭಿನ್ನವಾಗಿ ಪ್ರತಿಯೊಬ್ಬ ಆರೆಸ್ಸೆಸ್/ಬಿಜೆಪಿ ಬೆಂಬಲಿಗರು ಮಣಿಪುರ ವಿಷಯದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ನೀವು ಯಾರನ್ನಾದರೂ ದ್ವೇಷಿಸುವ ಕಾರಣ ಎಲ್ಲದಕ್ಕೂ ಅವರನ್ನು ಎಳೆದುತಂದು ನಿಮ್ಮ ಅಜೆಂಡಾವನ್ನು ಸಾಧಿಸುವುದು ಸಮಂಜಸವಲ್ಲ” ಎಂದು ಹೇಳಿದರು.
ಐಶೆ ಘೋಷ್ ಅವರು ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರು, ಅವರ ವಿರುದ್ಧ ಎರಡು ಎಫ್ಐಆರ್ ಕೂಡ ದಾಖಲಾಗಿದೆ. ಅವರು ಆರ್ಟಿಕಲ್ 370 ರ ರದ್ದತಿಯ ವಿರುದ್ಧ ಕೂಡ ಮಾತನಾಡಿದ್ದಾರೆ ಮತ್ತು ಕಾಶ್ಮೀರ ಸಮಸ್ಯೆಯನ್ನು ಎತ್ತಿಕಟ್ಟುವ ಮೂಲಕ ಮತ್ತು ಪೌರತ್ವ ಕಾಯ್ದೆಯ ವಿರುದ್ಧದ ಪ್ರತಿಭಟನೆಗೆ ಅದನ್ನು ಜೋಡಿಸುವ ಮೂಲಕ ಸಿಎಎ ವಿರುದ್ಧದ ಪ್ರತಿಭಟನೆಗೆ ಹೊಸ ಆಯಾಮವನ್ನು ಸೇರಿಸಿದ್ದರು.
ಐಶೆ ಘೋಷ್ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯಕ್ಕೆ ಸೇರಿದವರು, ಅಲ್ಲಿ ಭಾರತ ವಿರೋಧಿ ಘೋಷಣೆಗಳು “ಭಾರತ್ ತೇರೆ ತುಕ್ಡೆ ಹೋಂಗೆ ಇನ್ಶಾಲ್ಲಾಹ್ ಇನ್ಶಾಲ್ಲಾಹ್” ಮುಂತಾದ ಘಟನೆಗಳು ಈ ಹಿಂದೆ ನಡೆದಿದ್ದವು. ಈಕೆ ಕೂಡ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾಳೆ. ಇದಲ್ಲದೆ, ಜೆಎನ್ಯು ವಿದ್ಯಾರ್ಥಿಗಳು ವಾಡಿಕೆಯಂತೆ “ಆಜಾದಿ” ಘೋಷಣೆಗಳನ್ನು ಪಠಿಸುವುದರಲ್ಲಿ ನಿಸ್ಸೀಮರು.
What has RSS got to do with what happened in Manipur?
Just because you h@te someone, you will defame them? @RatanSharda55 @friendsofrss @KapilMishra_IND
— PallaviCT (@pallavict) July 20, 2023
https://twitter.com/aishe_ghosh/status/1681889790386655232?ref_src=twsrc%5Etfw%7Ctwcamp%5Etweetembed%7Ctwterm%5E1682098356385103872%7Ctwgr%5E864a57af345aeb25289553a739d33aecd4ae1e7b%7Ctwcon%5Es2_&ref_url=https%3A%2F%2Fwww.newsbharati.com%2FEncyc%2F2023%2F7%2F21%2FJNUSU-President-Aishe-Ghosh-drags-RSS-in-Manipur-violence-shares-derogatory-post.html
Aishe , still same cartoon ! Or want to change that to Abdul’s chand & Islamic terrorism?
Early vomiting is dangerous at times. https://t.co/LBnG86KSb2— Anil KB 🇮🇳🕉️🪷💵 (@anilbatchu) July 20, 2023
ಮೂಲ : News Bharti
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.