ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿಯಾಗಿ, ದೆಹಲಿ ಪೊಲೀಸರು ಇಂದಿನಿಂದ ಪ್ಯಾರಾ-ಗ್ಲೈಡರ್ಗಳು, ಪ್ಯಾರಾ-ಮೋಟರ್ಗಳು, ಹ್ಯಾಂಗ್-ಗ್ಲೈಡರ್ಗಳು, ಮಾನವರಹಿತ ವೈಮಾನಿಕ ವಾಹನಗಳು ಮತ್ತು ಮೈಕ್ರೋಲೈಟ್ ವಿಮಾನಗಳಂತಹ ಉಪ-ಸಾಂಪ್ರದಾಯಿಕ ವೈಮಾನಿಕ ಸಾಧನಗಳ ಹಾರಾಟವನ್ನು ನಿಷೇಧಿಸಿದ್ದಾರೆ.
ದೆಹಲಿ ಪೊಲೀಸ್ ಆಯುಕ್ತರು ಹೊರಡಿಸಿದ ಆದೇಶವು ಆಗಸ್ಟ್ 16 ರವರೆಗೆ ಜಾರಿಯಲ್ಲಿರುತ್ತದೆ. ಅಲ್ಲಿಯವರೆಗೆ ಯಾರೂ ಯಾವುದೇ ವೈಮಾನಿಕ ಸಾಧನಗಳನ್ನು ಹಾರಿಸುವಂತಿಲ್ಲ ಎಂದು ಕಟ್ಟಾಜ್ಞೆ ಮಾಡಲಾಗಿದೆ.
ಕ್ರಿಮಿನಲ್, ಸಮಾಜವಿರೋಧಿ ಅಂಶಗಳು ಅಥವಾ ಭಯೋತ್ಪಾದಕರು ಯಾವುದೇ ಕುಕೃತ್ಯ ನಡೆಸುವುದನ್ನು ತಡೆಯುವ ಸಲುವಾಗಿ ಈ ಆದೇಶವನ್ನು ಹೊರಡಿಸಲಾಗಿದೆ. ದುಷ್ಕರ್ಮಿಗಳು ಇಂತಹ ಸಾಧನಗಳನ್ನು ಬಳಸುವ ಮೂಲಕ ಸಾಮಾನ್ಯ ಸಾರ್ವಜನಿಕರು, ಗಣ್ಯರು ಮತ್ತು ಪ್ರಮುಖ ಸ್ಥಾಪನೆಗಳ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಅಪಾಯವಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.