ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಮತ್ತೆ ನಾಪತ್ತೆಯಾಗಿದ್ದಾರೆ. ಕಾಂಗ್ರೆಸ್ ಮೂಲಗಳು ಅವರು ಅಮೆರಿಕಾಗೆ ತೆರಳಿದ್ದಾರೆ ಎಂದು ಹೇಳುತ್ತಿದೆ. ಆಕಸ್ಮಿಕವೆಂದರೆ ಪ್ರಧಾನಿ ನರೇಂದ್ರ ಮೋದಿಯವರೂ ಪ್ರಸ್ತುತ ಅಮೆರಿಕಾ ಪ್ರವಾಸದಲ್ಲಿದ್ದಾರೆ.
ಯುಎಸ್ನಲ್ಲಿ ನಡೆಯುತ್ತಿರುವ ಚಾರ್ಲಿ ರೋಸ್ ಕಾನ್ಫರೆನ್ಸ್ನಲ್ಲಿ ಪಾಲ್ಗೊಳ್ಳಲು ರಾಹುಲ್ ಅಲ್ಲಿಗೆ ತೆರಳಿದ್ದಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ಬಿಜೆಪಿ ಈ ಹೇಳಿಕೆಯನ್ನು ತಳ್ಳಿ ಹಾಕಿದ್ದು, ಜೂನ್ 25ರಿಂದ ಜುಲೈ 5ರವರೆಗೆ ಚಾರ್ಲಿ ರೋಸ್ ಕಾನ್ಫರೆನ್ಸ್ ನಡೆಯುತ್ತೆ. ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದೆ.
ಆದರೆ ಕಾಂಗ್ರೆಸ್ ಮಾತ್ರ ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ, ಹಳೆಯ ದಿನಾಂಕದ ಬಗ್ಗೆ ಉಲ್ಲೇಖಿಸುತ್ತಿದೆ ಎಂದು ಆರೋಪಿಸಿದ್ದು, ಪ್ರಸ್ತುತ ವಿಕೇಂಡ್ ವಿದ್ ಚಾರ್ಲಿ ಕಾನ್ಫರೆನ್ಸ್ ನಡೆಯುತ್ತಿದೆ. ಇದೊಂದು ಖಾಸಗಿ ಕಾನ್ಫರೆನ್ಸ್ ಆದ ಕಾರಣ ಪಕ್ಷ ಇದರ ವಿವರವನ್ನು ಬಹಿರಂಗಪಡಿಸುವುದಿಲ್ಲ ಎಂದಿದೆ.
ಇಷ್ಟು ಮಾತ್ರವಲ್ಲದೇ ಇನ್ನೂ ಎರಡು ಕಾರಣಗಳನ್ನು ರಾಹುಲ್ ನಾಪತ್ತೆಯ ಬಗ್ಗೆ ಕಾಂಗ್ರೆಸ್ ನೀಡಿದೆ. ಅದೇನೆಂದರೆ ತನ್ನ ಅನಾರೋಗ್ಯ ಪೀಡಿತ ಅಜ್ಜಿಯನ್ನು ಕಾಣಲು ರಾಹುಲ್ ಯುಎಸ್ಗೆ ತೆರಳಿದ್ದಾರೆ ಎಂದಿದೆ. ಕಾಂಗ್ರೆಸ್ನ ಇನ್ನೊಂದು ಮೂಲ ಖಾಸಗಿ ಪ್ರವಾಸಕ್ಕಾಗಿ ಅವರು ತೆರಳಿದ್ದಾರೆ ಎಂದಿದೆ.
ಒಟ್ಟಿನಲ್ಲಿ ಮತ್ತೆ ರಾಹುಲ್ ನಾಪತ್ತೆಯಾಗಿರುವುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಣ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.