ದುಬೈ: ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೂ ಮುನ್ನ ಯುನೈಟೆಡ್ ಅರಬ್ ಎಮಿರೇಟ್ಸ್ನ ದುಬೈನಲ್ಲಿರುವ ಬುರ್ಜ್ ಖಲೀಫಾ ಶುಕ್ರವಾರ ತ್ರಿವರ್ಣ ಬಣ್ಣಗಳಿಂದ ಬೆಳಗಿತು ಮತ್ತು ನರೇಂದ್ರ ಮೋದಿಯವರ ಚಿತ್ರವು ಕೂಡ ಬೆಳಕುಗಳ ನಡುವೆ ಕಂಗೊಳಿಸಿತು.
ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ಗೆ ಎರಡು ದಿನಗಳ ಭೇಟಿಯ ನಂತರ ಶನಿವಾರ ಬೆಳಿಗ್ಗೆ ಅಬುಧಾಬಿ ತಲುಪಿದರು, ಅಲ್ಲಿ ಅವರು ಯುಎಇ ಅಧ್ಯಕ್ಷರೊಂದಿಗೆ ವಿಸ್ತೃತ ಮಾತುಕತೆಗಳನ್ನು ನಡೆಸುತ್ತಿದ್ದಾರೆ.
ವಿಶ್ವದ ಅತಿ ಎತ್ತರದ ಕಟ್ಟಡದಲ್ಲಿ ಭಾರತದ ರಾಷ್ಟ್ರಧ್ವಜದ ಬಣ್ಣಗಳು ಬೆಳಗುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ
ಬ್ರಿಟಿಷರ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಪಡೆದ 75ನೇ ವರ್ಷದ ಸ್ಮರಣಾರ್ಥ ದುಬೈನಲ್ಲಿರುವ ಬುರ್ಜ್ ಖಲೀಫಾವನ್ನು ಆಗಸ್ಟ್ 15, 2022 ರಂದು ಭಾರತೀಯ ತ್ರಿವರ್ಣ ಧ್ವಜದಿಂದ ಬೆಳಗಿಸಲಾಯಿತು. ಈ ವರ್ಷದ ಆರಂಭದಲ್ಲಿ ಭಾರತದ 74 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲೂ ವಿಶ್ವದ ಅತಿ ಎತ್ತರದ ಕಟ್ಟಡವು ತ್ರಿವರ್ಣದ ಬಣ್ಣಗಳಲ್ಲಿ ಬೆಳಗಿತು.
ಇದೀಗ ಮತ್ತೊಮ್ಮೆ ಮೋದಿ ಆಗಮನವನ್ನು ಸೂಚಿಸಲು ಬುರ್ಜ್ ಖಲೀಫಾ ತ್ರಿವರ್ಣದ ಬಣ್ಣಗಳಲ್ಲಿ ಬೆಳಗಿದೆ.
WATCH | Dubai's Burj Khalifa displayed the colours of the Indian national flag yesterday ahead of PM Modi's official visit to the country pic.twitter.com/xQ9e7cJ6uH
— ANI (@ANI) July 15, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.