ಹಂಪಿ: ವಿಶ್ವ ಪಾರಂಪರಿಕ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಂಪಿಯಲ್ಲಿ ಮೂರನೇ ಜಿ 20 ಸಂಸ್ಕೃತಿ ಕಾರ್ಯಪಡೆ (ಸಿಡಬ್ಲ್ಯೂಜಿ) ಸಭೆಯನ್ನು ಆಯೋಜಿಸಲಾಗಿದ್ದು, ಇಂದು ಅದಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟನೆ ನೆರವೇರಿಸಿದರು.
ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜೋಶಿ, ನಾವು ನಾಲ್ಕು ಆದ್ಯತೆಗಳನ್ನು ಗುರುತಿಸುವ ಮತ್ತು ಚರ್ಚಿಸುವ ಮೂಲಕ ಈ ಸಭೆಯನ್ನು ನಡೆಸಲು ಮುಂದಾಗಿದ್ದೇವೆ. ಹಂಪಿ ನಮ್ಮ ದೇಶದ ಸಂಸ್ಕೃತಿ ಹೃದಯಭಾಗ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಡುತ್ತಿದೆ. ನಮ್ಮ ಮುಂದೆ ಇರುವ 4 ಆದ್ಯತೆಯ ಕ್ಷೇತ್ರಗಳೆಂದರೆ, ಸಾಂಸ್ಕೃತಿಕ ಆಸ್ತಿಯ ರಕ್ಷಣೆ ಮತ್ತು ಪುನರ್ರಚನೆ, ಸುಸ್ಥಿರ ಭವಿಷ್ಯಕ್ಕಾಗಿ ಲಿವಿಂಗ್ ಹೆರಿಟೇಜ್ ಬಳಸಿಕೊಳ್ಳುವುದು, ಸಾಂಸ್ಕೃತಿಕ ಮತ್ತು ಸೃಜನಾತ್ಮಕ ಕೈಗಾರಿಕೆಗಳು ಮತ್ತು ಸೃಜನಾತ್ಮಕ ಆರ್ಥಿಕತೆಯ ಪ್ರಚಾರ, ಸಂಸ್ಕೃತಿಯ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಡಿಜಿಟಲ್ ತಂತ್ರಜ್ಞಾನಗಳನ್ನು ನಿಯಂತ್ರಿಸುವುದು ಎಂದು ಹೇಳಿದರು.
ಸಭೆಯ ಸಂದರ್ಭದಲ್ಲಿ ಲಂಬಾಣಿ ಕಸೂತಿ ಪ್ಯಾಚ್ಗಳ ಅತಿದೊಡ್ಡ ಪ್ರದರ್ಶನವನ್ನು ರಚಿಸುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸೇರುವ ಗುರಿಯನ್ನು ಹೊಂದಲಾಗಿದೆ. ಲಂಬಾಣಿ ಸಮುದಾಯದ 450 ಕ್ಕೂ ಹೆಚ್ಚು ಮಹಿಳಾ ಕುಶಲಕರ್ಮಿಗಳು ಈ ಪ್ರಯತ್ನದಲ್ಲಿ ಕೈಜೋಡಿಲಿದ್ದಾರೆ. ಸಂಡೂರ್ ಕುಶಾಲ ಕಲಾ ಕೇಂದ್ರಕ್ಕೆ ಸಂಬಂಧಿಸಿದ 1300 ಲಂಬಾಣಿ ಕಸೂತಿ ಪ್ಯಾಚ್ ವರ್ಕ್ಗಳನ್ನು ಪ್ರದರ್ಶಿಸಲಾಗುತ್ತದೆ.
UNESCO ವಿಶ್ವ ಪರಂಪರೆಯ ತಾಣವಾಗಿರುವ ಹಂಪಿಯ ಸ್ಮಾರಕಗಳಲ್ಲಿ ವಿಜಯ ವಿಠ್ಠಲ ದೇವಸ್ಥಾನ, ರಾಜಮನೆತನದ ಆವರಣ ಮತ್ತು ಯಡೂರು ಬಸವಣ್ಣ ಸಂಕೀರ್ಣದಂತಹ ಪಾರಂಪರಿಕ ತಾಣಗಳನ್ನು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.