ಕೊಲಂಬೋ: ತಮ್ಮ ದೇಶವನ್ನು ಭಾರತದ ವಿರುದ್ಧ ಯಾವುದೇ ರೀತಿಯ ಬೆದರಿಕೆಯ ಆಧಾರವಾಗಿ ಬಳಸಿಕೊಳ್ಳಲು ಬಿಡುವುದಿಲ್ಲ ಎಂದು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಹೇಳಿದ್ದಾರೆ.
ಬ್ರಿಟನ್ ಮತ್ತು ಫ್ರಾನ್ಸ್ಗೆ ಅಧಿಕೃತ ಭೇಟಿಯ ಸಂದರ್ಭದಲ್ಲಿ ಫ್ರೆಂಚ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಶ್ರೀಲಂಕಾದಲ್ಲಿ ಚೀನಾದ ಮಿಲಿಟರಿಯ ಉಪಸ್ಥಿತಿಯ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ, ಹಂಬಂಟೋಟಾ ಬಂದರಿನ ಬಗ್ಗೆ ಹಲವಾರು ವದಂತಿಗಳಿವೆ ಎಂದು ಒಪ್ಪಿಕೊಂಡ ವಿಕ್ರಮಸಿಂಘೆ, ಬಂದರನ್ನು ಚೀನಾ ಮರ್ಚೆಂಟ್ಸ್ ಗ್ರೂಪ್ಗೆ ನೀಡಲಾಗಿದ್ದರೂ, ಶ್ರೀಲಂಕಾ ಸರ್ಕಾರವು ಅದರ ಭದ್ರತೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
“ತಮ್ಮ ದೇಶ ತಟಸ್ಥವಾಗಿದೆ ಮತ್ತು ಚೀನಾದೊಂದಿಗೆ ಯಾವುದೇ ಮಿಲಿಟರಿ ಒಪ್ಪಂದವನ್ನು ಮಾಡಿಲ್ಲ ಮತ್ತು ಮಿಲಿಟರಿ ಒಪ್ಪಂದವನ್ನು ಮುಂದೆ ಮಾಡಿಕೊಳ್ಳುವುದೂ ಇಲ್ಲ” ಎಂದು ಹೇಳಿದ್ದಾರೆ.
ಹಂಬಂಟೋಟ ಬಂದರನ್ನು ಚೀನಾ ಸೇನೆ ಬಳಸಿಕೊಳ್ಳುವುದರಿಂದ ಸಮಸ್ಯೆ ಇಲ್ಲ ಎಂದಿದ್ದಾರೆ. 2017 ರಲ್ಲಿ, ಬೀಜಿಂಗ್ ಈ ಬಂದರನ್ನು ಸಾಲದ ಬದಲಿಗೆ 99 ವರ್ಷಗಳ ಗುತ್ತಿಗೆಗೆ ತೆಗೆದುಕೊಂಡಿದೆ.
ವಿಶ್ವಬ್ಯಾಂಕ್ನ ನೆರವು ಈ ಸಮಯದಲ್ಲಿ ಹೆಚ್ಚು ಅಗತ್ಯವಿದೆ ಮತ್ತು ಶ್ರೀಲಂಕಾದ ಆರ್ಥಿಕತೆಯನ್ನು ಹೆಚ್ಚಿಸಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ. “ವಿಶ್ವಬ್ಯಾಂಕ್ನಿಂದ ಹಣವನ್ನು ಪಡೆಯುವ ಸಲುವಾಗಿ ನಾವು ಇಲ್ಲಿಯವರೆಗೆ ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದ್ದೇವೆ. ಇದರ ಪರಿಣಾಮವಾಗಿ, ನಾವು ವಿಶ್ವಬ್ಯಾಂಕ್ ಬೆಂಬಲಕ್ಕೆ ಅರ್ಹರಾಗಿದ್ದೇವೆ” ಎಂದು ವಿಕ್ರಮಸಿಂಘೆ ಹೇಳಿದರು. “ಇದು ಈ ಸಮಯದಲ್ಲಿ ಹೆಚ್ಚು ಅಗತ್ಯವಿರುವ ಹಣ ಮತ್ತು ಆರ್ಥಿಕತೆಯನ್ನು ಬಲಪಡಿಸಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ” ಎಂದು ಅವರು ಹೇಳಿದರು.
Sri Lankan President Ranil #Wickremesinghe @FRANCE24: 'There’s no Chinese military base in Sri Lanka. There’s a lot of speculation about Hambantota harbor but security is controlled by us. We’ve no military agreement with China and there won’t be one”
▶️https://t.co/lEuPa071v4 pic.twitter.com/psMnPCujqE— Marc Perelman (@mperelman) June 27, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.