ಮುಂಬಯಿ: ಇಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಮಾಡುತ್ತಿದ್ದಾರೆ. ಮುಂಬೈನ ಗೇಟ್ವೇ ಆಫ್ ಇಂಡಿಯಾದಲ್ಲಿ ನೌವಾರಿ ಸೀರೆಯಲ್ಲಿ ಮಹಿಳೆಯರ ಗುಂಪೊಂದು ಯೋಗ ಪ್ರದರ್ಶನವನ್ನು ಮಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ವಿಡಿಯೋದಲ್ಲಿ ಯುವತಿಯರು ಸಾಂಪ್ರದಾಯಿಕ ಮಹಾರಾಷ್ಟ್ರದ ಸೀರೆಯನ್ನು ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ಸಾಹದಿಂದ ಯೋಗ ಮಾಡುತ್ತಿರುವುದನ್ನು ಕಾಣಬಹುದು. ಮಹಿಳೆಯರು ‘ಓಂ’ ಪಠಣದೊಂದಿಗೆ ಯೋಗದ ಅವಧಿಯನ್ನು ಪ್ರಾರಂಭಿಸಿದ್ದಾರೆ. ಎಲ್ಲರೂ ಯೋಗ ಟಿ ಶರ್ಟ್ ಹಾಕಿ ಮಾಡಿದರೆ ಈ ಮಹಿಳೆಯರು ವಿಶಿಷ್ಟವಾಗಿ ಸಾಂಪ್ರದಾಯಿಕ ಧಿರಿಸಿನಲ್ಲಿ ಯೋಗ ಮಾಡಿದ್ದು ಸಹಜವಾಗಿಯೇ ಎಲ್ಲರ ಗಮನ ಸೆಳೆದಿದೆ.
ತಮ್ಮ ಯೋಗ ಭಂಗಿಯ ಮೂಲಕ ಈ ಮಹಿಳೆಯರು ಸೀರೆ ನೀರೆಗೆ ಎಂದಿಗೂ ಅಡ್ಡಿಯಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಂತರಾಷ್ಟ್ರೀಯ ಯೋಗ ದಿನವನ್ನು ಮೊದಲ ಬಾರಿಗೆ 2015 ರಲ್ಲಿ ಆಚರಿಸಲಾಯಿತು ಮತ್ತು ಅಂದಿನಿಂದ ಪ್ರತಿ ವರ್ಷ ಪೂರ್ಣ ಉತ್ಸಾಹದಿಂದ ಜೂನ್ 21 ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.
ನೌವಾರಿ (ಕಸ್ತ ಸೀರೆ, ಕಚ್ಚ, ಸಾಕಚ್ಚ, ಲುಗಡೆ ಎಂದೂ ಕರೆಯುತ್ತಾರೆ) ಮಹಾರಾಷ್ಟ್ರದಲ್ಲಿ ಮಹಿಳೆಯರು ಧರಿಸುವ ಒಂಬತ್ತು ಗಜಗಳ ಸೀರೆಯಾಗಿದೆ. ಒಂಬತ್ತು ಗಜಗಳಷ್ಟು ಸೀರೆಯ ಉದ್ದದಿಂದ ‘ನೌವರಿ’ ಎಂಬ ಹೆಸರು ಹುಟ್ಟಿಕೊಂಡಿದೆ.
#WATCH | Maharashtra: Women in Nauwari saree perform yoga at Gateway of India in Mumbai on the occasion of #9thInternationalYogaDay pic.twitter.com/SVzYdHgM90
— ANI (@ANI) June 21, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.