ನವದೆಹಲಿ: ಕಳೆದ ವಾರ ಹೈದರಾಬಾದ್ನಲ್ಲಿ ನಡೆದ ಜಿ20 ಕೃಷಿ ಸಚಿವರ ಸಭೆಯಲ್ಲಿ ಕೆನಡಾದ ಕೃಷಿ ಮತ್ತು ಕೃಷಿ-ಆಹಾರ ಸಚಿವೆ ಮೇರಿ-ಕ್ಲಾಡ್ ಬಿಬ್ಯೂ ಭಾಗವಹಿಸಿದ್ದರು, ಅಲ್ಲಿ ಅವರು ಬಹುಪಕ್ಷೀಯ ಕಾರ್ಯಕ್ರಮದ ಬದಿಯಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.
“ಕೃಷಿ ಶುದ್ಧ ತಂತ್ರಜ್ಞಾನಗಳು, ಸುಸ್ಥಿರ ಅಭಿವೃದ್ಧಿ ಮತ್ತು ಅದರ ಕೃಷಿ ವಲಯ ಮತ್ತು ಸಿರಿಧಾನ್ಯ ಉತ್ಪಾದನೆಯ ಮೂಲಕ ಜಾಗತಿಕ ಆಹಾರ ಭದ್ರತೆಯ ಚಾಲಕನಾಗಲು ಭಾರತ ಸಾಮರ್ಥ್ಯ ಹೊಂದಿದೆ” ಎಂದು ಬಿಬ್ಯೂ ಅವರು ತೋಮರ್ ಅವರ ಭೇಟಿಯ ನಂತರ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದಾರೆ.
ಬಿಬ್ಯೂ ಅವರೊಂದಿಗಿನ ಭೇಟಿಯ ನಂತರ ಮಾತನಾಡಿದ ತೋಮರ್ ಅವರು, “ಕೆನಡಾವು ಬೃಹತ್ ಕೃಷಿ ಉತ್ಪಾದನೆ ಮತ್ತು ಕೃಷಿ-ತಾಂತ್ರಿಕ ಪ್ರಗತಿಯನ್ನು ಹೊಂದಿದೆ, ಇದು ಭಾರತದೊಂದಿಗೆ ಸಹಕಾರದ ಸಾಮರ್ಥ್ಯವನ್ನು ಉತ್ತೇಜಿಸುತ್ತದೆ” ಎಂದಿದ್ದಾರೆ.
ಉಭಯ ನಾಯಕರ ನಡುವಣ ಚರ್ಚೆಗಳು ಉಭಯ ದೇಶಗಳ ನಡುವಿನ ಕೃಷಿ ಸಂಬಂಧಗಳಲ್ಲಿನ ಸುಧಾರಣೆಗಳ ಮೇಲೆ ಕೇಂದ್ರೀಕೃತವಾಗಿತ್ತು.
ಜೂನ್ 4 ರಂದು ಬ್ರಾಂಪ್ಟನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ದಿವಂಗತ ಇಂದಿರಾ ಗಾಂಧಿಯವರ ಹತ್ಯೆಯನ್ನು ಒಳಗೊಂಡ ಮೆರವಣಿಗೆಯ ನಂತರ ಉಭಯ ದೇಶಗಳ ನಡುವಣ ಸಂಬಂಧವು ಹಳಸಿದ ನಂತರ ಕೆನಡಾದ ಕ್ಯಾಬಿನೆಟ್ ಸಚಿವರು ಜಿ20 ಕಾರ್ಯಕ್ರಮಗಳಿಗಾಗಿ ಭಾರತಕ್ಕೆ ನೀಡಿದ ಎರಡನೇ ಭೇಟಿ ಇದಾಗಿದೆ.
In a bilateral meeting with Canadian Agriculture Minister Ms. Marie-Claude Bibeau, discussions were held on reforms in agricultural relations between the two countries.#G20India #G20AMM2023 @g20org pic.twitter.com/WiVajcTYcu
— Narendra Singh Tomar (@nstomar) June 17, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.