ಬೆಂಗಳೂರು: ಎಲ್ಲ ಧರ್ಮ, ಸಮುದಾಯಗಳು ಸಮಾನ ಎನ್ನುವ ರಾಜ್ಯದ ನೂತನ ಕಾಂಗ್ರೆಸ್ ಸರಕಾರಕ್ಕೆ ಹಿಂದುಗಳು ಕಡಿಮೆ ಸಮಾನ ಆಗುವುದು ಹೇಗೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಶ್ನಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದೂ, ಮುಸ್ಲಿಮರು, ಕ್ರೈಸ್ತರು, ಪಾರ್ಸಿ, ಜೈನರನ್ನು ಸಮಾನವಾಗಿ ನೋಡುವುದಾಗಿ ಹೇಳುವ ಸರಕಾರವು ತಾರತಮ್ಯ ಧೋರಣೆ ಹೊಂದಿರಬಾರದು ಎಂದು ನುಡಿದರು.
ಸಂಘ ಪರಿವಾರದವರಿಗೆ ಕೊಟ್ಟ ಭೂಮಿಯನ್ನು ವಾಪಸ್ ಪಡೆಯುತ್ತೇವೆ ಎನ್ನುವ ಸರಕಾರದ ಧೋರಣೆ ಹೇಗೆ ಸರಿಯಾಗುತ್ತದೆ? ಹಾಗಿದ್ದರೆ ಹಿಂದೂಗಳು ಕಡಿಮೆ ಸಮಾನರೇ ಎಂದು ಅವರು ಪ್ರಶ್ನಿಸಿದರು. ಭ್ರಷ್ಟಾಚಾರ ಅಕ್ರಮಗಳ ಕುರಿತ ತನಿಖೆಯನ್ನು ರಾಜ್ಯ ಸರಕಾರವು ತಮ್ಮ ಇಲಾಖೆಯಿಂದಲೇ ಆರಂಭಿಸಲಿ ಎಂದು ಅವರು ಕೋರಿದರು.
ದಲಿತ ವಿರೋಧಿಗಳು ಎಂಬ ಆಕ್ಷೇಪಕ್ಕೆ ಉತ್ತರಿಸಿದ ಅವರು, ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಜಾತಿಯವರಿಗೆ ಶೇ 15ರ ಬದಲಾಗಿ ಶೇ 17ರಷ್ಟು ಮೀಸಲಾತಿ ನೀಡಿದ್ದು ಬಿಜೆಪಿ ಸರಕಾರ. ಪರಿಶಿಷ್ಟ ಪಂಗಡಕ್ಕೆ ಶೇ 3ರಿಂದ ಶೇ 7ಕ್ಕೆ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ ಸರಕಾರ. ಜಿಜ್ಞಾಸೆಗಳು ಇರಬಹುದು; ಆದರೆ, ಸಮಾಜದ ಕಟ್ಟಕಡೆಯ ಮನುಷ್ಯ ಮುಖ್ಯವಾಹಿನಿಗೆ ಬರಬೇಕು ಎಂಬ ಕಾರಣಕ್ಕಾಗಿ ಒಳ ಮೀಸಲಾತಿಯನ್ನು ನಮ್ಮ ಪಕ್ಷ ಪ್ರಕಟಿಸಿದೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಟ್ಟ ಪಕ್ಷ ನಮ್ಮದು ಎಂದು ಅವರು ನುಡಿದರು.
ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರ ವಿಚಾರದ ಪ್ರತಿಪಾದನೆ, ಭಾಷಣ ಮಾಡುವುದು ಬೇರೆ. ಹೆಸರನ್ನು ಘೋಷಣೆ ಮಾಡುವುದು ಬೇರೆ; ಅಂಬೇಡ್ಕರ್ ಅವರು ಭೇಟಿ ನೀಡಿದ ಜಗತ್ತಿನ ಎಲ್ಲ ಸ್ಥಳಗಳನ್ನು ಅಭಿವೃದ್ಧಿ ಮಾಡಿದ್ದು ನರೇಂದ್ರ ಮೋದಿಜಿ ಅವರ ಸರಕಾರ ಎಂದರು.
ಭಯೋತ್ಪಾದಕರನ್ನು ಬೆಂಬಲಿಸುವವರನ್ನು ಬಿಜೆಪಿ ವಿರೋಧಿಸುತ್ತದೆ. ಬಾಂಬ್ ಹಾಕುವವರ ಜೊತೆ, ದೇಶವಿರೋಧಿ ಘೋಷಣೆ ಕೂಗುವವರ ಜೊತೆ ನಮ್ಮ ರಾಜ್ಯ ಇಲ್ಲ. ಪಾಕಿಸ್ತಾನಕ್ಕೆ ಜಯವಾಗಲಿ ಎನ್ನುವವರ ಜೊತೆ ನಮ್ಮ ರಾಜ್ಯ ಇಲ್ಲ. ಭಯೋತ್ಪಾದಕತೆಯನ್ನು ಬಿಜೆಪಿ ವಿರೋಧಿಸುತ್ತದೆ. ಅದನ್ನು ಗಮನಿಸಲು ಅವರು ಆಗ್ರಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.