ಸುಬ್ರಹ್ಮಣ್ಯ : ಗುತ್ತಿಗಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಎಂಸಿಎಫ್ ಕೃಷಿ ವಿಜ್ಞಾನಿ ಡಾ.ಆದರ್ಶ ಟಿಎಸ್ ಅವರು ಮಣ್ಣಿನ ಫಲವತ್ತತೆ ಹಾಗೂ ಮಂಗಳಾ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು ಮಣ್ಣಿನಲ್ಲಿ ಝಿಂಕ್,ಬೋರಾನ್ ಮೊದಲಾದ ಸೂಕ್ಷ್ಮ ಪೋಷಕಾಂಶಗಳ ಕೊರತೆಯಿಂದ ಬೆಳೆಯಲ್ಲಿ ಇಳುವರಿ ಕಡಿಮೆಯಾಗುತ್ತಿದೆ,ಹೀಗಾಗಿ ಮಣ್ಣು ಪರೀಕ್ಷೆ ಮೂಲಕ ಪೋಷಕಾಂಶಗಳ ಕೊರತೆ ಹಾಗೂ ರಸಸಾರವನ್ನು ಪತ್ತೆ ಮಾಡಿ ಮಣ್ಣಿನ ಫಲವತ್ತತೆ ಹೆಚ್ಚಿಸಬೇಕಾಗಿದೆ ಎಂದರು.ಮಣ್ಣು ಪರೀಕ್ಷೆ ಉಚಿತವಾಗಿ ಮಾಡಿಸಲು ಎಂಸಿಎಫ್ ಅವಕಾಶ ನೀಡಿದ್ದು , ಈ ಪ್ರಯೋಜನವನ್ನು ಕೃಷಿಕರು ಬಳಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಮಣ್ಣಿನ ಪರೀಕ್ಷೆ ಬಗ್ಗೆ ಕೃಷಿಕರು ಅ.೧೦ ರ ಒಳಗಾಗಿ ಸಹಕಾರಿ ಸಂಘಕ್ಕೆ ಮಣ್ಣನ್ನು ವೈಜ್ಞಾನಿಕ ರೀತಿಯಲ್ಲಿ ತಮ್ಮ ಕೃಷಿ ಭೂಮಿಯಿಂದ ತೆಗೆದು ತಂದು ಕೊಡಬೇಕು, ಬಳಿಕ ಮಣ್ಣನ್ನು ಕೊಂಡೊಯ್ದು ವರದಿ ನೀಡಲಾಗುವುದು.ಈ ಸಂದರ್ಭದಲ್ಲಿ ಗುತ್ತಿಗಾರು ಪ್ರಾಥಮಿಕ ಸಹಕಾರಿ ಸಂಘ ಹಾಗೂ ಗುತ್ತಿಗಾರು ಯುವಕ ಮಂಡಲ ವತಿಯಿಂದ ವಿತರಣೆ ಮಾಡುವ ಕಾರ್ಯಕ್ರಮ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಮುಳಿಯ ಕೇಶವ ಭಟ್ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.