ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ನಿಗದಿಯಾಗಿದೆ. ಕಳೆದ 5 ವರ್ಷ ರಾಜ್ಯದಲ್ಲಿ ಬಿಜೆಪಿ ಸರಕಾರ ಆಳ್ವಿಕೆ ನಡೆಸಿತ್ತು. ಅದರ ಮುನ್ನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಳ್ವಿಕೆ ನಡೆಸಿತ್ತು. ಈ ಎರಡೂ ಸರಕಾರಗಳ ಆಡಳಿತಾವಧಿಯಲ್ಲಿ ಸಾಕಷ್ಟು ವ್ಯತ್ಯಾಸವನ್ನು ನಾವು ಕಾಣಬೇಕಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ರಾಜ್ಯದಲ್ಲಿ 20 ಕ್ಕೂ ಮಿಕ್ಕಿ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆದಿವೆ. ಒಂದು ವರ್ಗದ ಓಲೈಕೆಗಾಗಿ ಸಾಕಷ್ಟು ಯೋಜನೆಗಳು, ಭಾಗ್ಯಗಳನ್ನು ಜಾರಿಗೊಳಿಸಲಾಯಿತು. ವಿವಾದಿತ ಟಿಪ್ಪು ಜಯಂತಿಯನ್ನು ಹುಟ್ಟು ಹಾಕಿ ಸಮಾಜದಲ್ಲಿ ಶಾಂತಿ ಸಾಮರಸ್ಯಕ್ಕೆ ಎಳ್ಳು ನೀರು ಬಿಡಲಾಯಿತು. ವೋಟ್ ಬ್ಯಾಂಕ್ ಗಾಗಿ ಧರ್ಮ ಧರ್ಮಗಳ ಮಧ್ಯೆ ಬಹುದೊಡ್ಡ ಕಂದಕ ಸೃಷ್ಟಿಸಿ ಒಡೆದು ಆಳುವ ನೀತಿಗೆ ಮುನ್ನುಡಿ ಬರೆದಿರುವುದೇ ಅಂದಿನ ಸಿದ್ದರಾಮಯ್ಯರ ತುಘಲಕ್ ಸರಕಾರ. ಗೋಮಾಂಸ ತಿನ್ನುತ್ತೇನೆ,ಮೀನು ತಿಂದು ದೇವಳ ಪ್ರವೇಶಿಸುತ್ತೇನೆ ಎಂಬ ಹೇಳಿಕೆಯ ಮೂಲಕ ಕೋಟ್ಯಾಂತರ ಮಂದಿಯ ಧಾರ್ಮಿಕ ನಂಬಿಕೆಗೆ ಅಪಚಾರ, ಭಯೋತ್ಪಾದಕ ಸಂಘಟನೆಗಳ ಜೊತೆ ನಂಟು ಹೊಂದಿರುವ ಪಿಎಫ್ಐ ನಂತಹ ಸಂಘಟನೆಯ ಕಾರ್ಯಕರ್ತರ ಮೇಲಿದ್ದ ಮೊಕ್ಕದ್ದಮೆಗಳ ವಾಪಸಾತಿ ಮೂಲಕ ಪ್ರಶಾಂತ್ ಪೂಜಾರಿ ಹತ್ಯೆಯಿಂದ ಹಿಡಿದು ಪ್ರವೀಣ್ ನೆಟ್ಟಾರ್ ಹತ್ಯೆಯವರೆಗೆ ಪಿಎಫ್ಐ ಅಟ್ಟಹಾಸಕ್ಕೆ ಕುಮ್ಮಕ್ಕು,ಕಲ್ಲಡ್ಕ ಶ್ರೀ ರಾಮವಿದ್ಯಾ ಕೇಂದ್ರದ ಮಕ್ಕಳ ಅನ್ನಕ್ಕೇ ಕನ್ನ ಇವೆಲ್ಲವೂ ಸಿದ್ದರಾಮಯ್ಯ ಸರಕಾರದಲ್ಲಿ ನಡೆದ ಧಾರ್ಮಿಕ ಸಾಮಾಜಿಕ ಅಪಚಾರಗಳೆಂದೇ ಹೇಳಬಹುದಾಗಿದೆ.
ಬಳಿಕ ಕಳೆದ 5 ವರ್ಷಗಳ ಆಳ್ವಿಕೆ ನಡೆಸಿದ ಬಿ.ಎಸ್ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದಲ್ಲಿ ಸಾಮಾಜಿಕ ಸಾಮರಸ್ಯ, ಐಕ್ಯತೆ,ಅಭಿವೃದ್ಧಿ, ಹಿಂದುತ್ವಕ್ಕೆ ಆದ್ಯತೆ ನೀಡಲಾಗಿದ್ದು,ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೂ ಮೂಲಭೂತ ಸೌಕರ್ಯಗಳ ಮೂಲಕ ಆದ್ಯತೆ ನೀಡಲಾಗಿದೆ.ತುಷ್ಟಿಕರಣ ನೀತಿಗೆ ತಿಲಾಂಜಲಿ ಇಟ್ಟು ಸರ್ವರಿಗೂ ಸಹಬಾಳ್ವೆ, ಸರ್ವರಿಗೂ ಸಮಬಾಳು ನೀತಿಯ ಆಡಳಿತ ಬಿಜೆಪಿ ಸರಕಾರದ ಆದ್ಯತೆಯಾಗಿತ್ತು.
ಜನರ ಆಶಾಭಾವನೆ ಆಶೋತ್ತರಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಆಡಳಿತ ನೀಡಿರುವುದು, ಅಭಿವೃದ್ಧಿ ಕಾರ್ಯಗಳು,ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ, ರಸ್ತೆ,ವಿದ್ಯುತ್, ನೀರು,ವಸತಿ,ಶಿಕ್ಷಣ, ಆರೋಗ್ಯ, ಕೃಷಿ,ರೈತಾಪಿ ವರ್ಗದ ಹೀಗೆ ಎಲ್ಲಾ ಸಮುದಾಯ ಹಾಗೂ ಎಲ್ಲಾ ವ್ಯವಸ್ಥೆಗಳ ಧ್ವನಿಯಾಗಿ ಬಿಜೆಪಿ ಆಡಳಿತ ನಡೆಸಿದೆ. ವಿಶೇಷವಾಗಿ ಗಮನಿಸಬೇಕಾದುದು ಹಿಂದೂಗಳ ಹತ್ಯೆಯ ಬಗ್ಗೆ, ಮೂಡಬಿದ್ರೆಯ ಪ್ರಶಾಂತ್ ಪೂಜಾರಿ ಎಂಬ ಹೂವಿನ ವ್ಯಾಪಾರಿ ಬಜರಂಗದಳದ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕಾರ್ಯಕರ್ತನ ಹತ್ಯೆ, ಬಿಜೆಪಿ ಕಾರ್ಯಕರ್ತ ದೀಪಕ್ ಪೂಜಾರಿ, ಆರೆಸ್ಸೆಸ್ಸ್ ಕಾರ್ಯಕರ್ತ ಶರತ್ ಮಡಿವಾಳ, ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಎಂಬ ಯುವಕನ ಹತ್ಯೆಯ ಬಗ್ಗೆ. ಎಲ್ಲಾ ಘಟನೆಗಳಲ್ಲಿ ಎಸ್ ಡಿ ಪಿ ಐ ಹಾಗೂ ಅಂದಿನ ಕಾಂಗ್ರೆಸ್ ಸರಕಾರದ ನೇರ ಪಾತ್ರವನ್ನು ನಾವು ಯೋಚಿಸಬೇಕಿದೆ. ಈ ಎಲ್ಲಾ ಕಾರ್ಯಕರ್ತರು ಬಡತನದ ಕುಟುಂಬದಲ್ಲಿ ಜೀವನ ಸಾಗಿಸುವ ಮಂದಿಗಳೇ ಆಗಿದ್ದು, ಮನೆಗೆ ಆಧಾರವಾಗಿರುವ ಈ ಯುವಕರ ಮನೆ ಮಂದಿಗೆ ಬಿಜೆಪಿ ಸಂಘಪರಿವಾರ ಇಂದಿಗೂ ಬೆನ್ನೆಲುಬಾಗಿ ನಿಂತಿರುವುದು ಗಮನಿಸಬೇಕಾದ ಅಂಶ.
ಆದರೆ ಈ ಅಮಾಯಕ ಕುಟುಂಬಗಳು ತನ್ನ ಮಗ, ಸಹೋದರನನ್ನು ಕಳೆದುಕೊಂಡ ದುಃಖದ ಮಡುವಿನಲ್ಲಿದೆ. ಸಂಘ ಬಿಜೆಪಿ ಎಂಬ ಕಾರಣಕ್ಕೆ ಹತ್ಯೆಗಳನ್ನೇ ಮೂಲ ಉದ್ದೇಶ ಇಟ್ಟುಕೊಂಡಿರುವ ಮತಾಂಧರಿಗೆ ಬೆಂಬಲ ನೀಡುವವರು ಯಾರು? ಇಂದು ಸ್ಥಾನಮಾನ ಸಿಕ್ಕಿಲ್ಲವೆಂದು ಪಕ್ಷೇತರರಾಗಿ ಸ್ಪರ್ದಿಸುವವರ ಸ್ಪರ್ಧೆಯಿಂದ ಲಾಭ ಯಾರಿಗೆ? ಪಕ್ಷಾಂತರ ಮಾಡುವವರು ಬಹಿರಂಗ ಸಭೆಯಲ್ಲಿ ಸವಾಲು ಹಾಕುತ್ತಾರೆಂದರೆ ಇದರ ಮುನ್ಸೂಚನೆ ಏನು? ನಾವು ನೀಡುವ ಒಂದೊಂದು ಮತಗಳು ವ್ಯರ್ಥವಾಗದೆ ಬಲಿದಾನವಾದ ನಮ್ಮ ಸಹೋದರ ಸಾವಿಗೆ ನ್ಯಾಯ ಒದಗಿಸಬೇಕಿದೆ. ಇಬ್ಬರ ಜಗಳ ಮೂರನೆಯ ವ್ಯಕ್ತಿಗೆ ಲಾಭ ತಂದೊಡ್ಡುವ ಸ್ಥಿತಿಗೆ ನಾವು ಕಾರಣರಾಗಬಾರದು. ಹತ್ಯೆಗೀಡಾದ ನಮ್ಮ ಕಾರ್ಯಕರ್ತರ ಪರವಾಗಿ ನಿಂತ ಪರಿವಾರ ಸಂಘಟನೆಯ ಬಾಜಾಪಗೆ ನಮ್ಮ ಮತ ನೀಡುವ ಮೂಲಕ ಕಾರ್ಯಕರ್ತರ ಕುಟುಂಬಗಳ ಕಣ್ಣೀರಿಗೆ ಆಸರೆಯಾಗೋಣ.
✍️ನೊಂದ ಮತದಾರ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.