ಪ್ರಾಚೀನ ಕಾಲದಿಂದಲೂ ಸಮರ್ಥ ಮತ್ತು ದಕ್ಷ ಮಂತ್ರಿಗಳು, ರಾಜತಾಂತ್ರಿಕರು ಮತ್ತು ಗೂಢಚಾರರನ್ನು ಹೊಂದಿದ ಪರಿಣಾಮ ಭಾರತ ಸಮೃದ್ಧ ಮತ್ತು ಬಲಿಷ್ಠ ರಾಷ್ಟ್ರವಾಗಿತ್ತು . ಇಂದು, ಭಾರತವು ವಿಶ್ವಗುರುವಾಗುವ ಗುರಿಯಿಟ್ಟುಕೊಂಡಿದೆ. ಇಂತಹ ಸಂದರ್ಭದಲ್ಲಿ ಅದು ತನ್ನ ಪ್ರಾಚೀನ ಇತಿಹಾಸದಿಂದ ಮತ್ತು ಇತಿಹಾಸದ ಅತ್ಯಂತ ಆಕರ್ಷಕ ವ್ಯಕ್ತಿತ್ವಗಳಲ್ಲಿ ಒಂದಾದ ಶ್ರೀ ರಾಮದೂತ ಆಂಜನೇಯನಿಂದ ಪಾಠಗಳನ್ನು ಕಲಿಯಬೇಕಾಗಿದೆ.
ಆರಂಭಿಕ ಜೀವನ ಮತ್ತು ಬಾಲ್ಯ
ಅಂಜನಾ ಮತ್ತು ಕೇಸರಿ ಹನುಮಂತನ ಮಗ. ವಾಯುದೇವನು ಅವನ ರಕ್ಷಕನಾಗಿದ್ದರಿಂದ ಪವನಪುತ್ರ ಎಂದೂ ಕರೆಯುತ್ತಾರೆ. ಸೂರ್ಯನಾರಾಯಣ ಅವನ ಗುರುವಾಗಿದ್ದು, ಅವರಿಂದ ವೇದಕೋಶ, ಧನುರ್ವೇದ, ಗಂಧರ್ವ ವಿದ್ಯೆ, ನೀತಿ, ನ್ಯಾಯ, ಪ್ರಬಂಧನ ಮತ್ತು ರಾಜಕೀಯ ಎಲ್ಲವನ್ನೂ ಕಲಿತ.
ವಾನರರಾಜ ಸುಗ್ರೀವನ ಆಸ್ಥಾನದಲ್ಲಿ ಮಂತ್ರಿ
ಸೂರ್ಯನಾರಾಯಣನಿಂದ ವಿದ್ಯಾಭ್ಯಾಸ ಮುಗಿಸಿದ ಬಳಿಕ ಹನುಮಂತ ಕಿಷ್ಕಿಂಧಾ ರಾಜ ಸುಗ್ರೀವನ ಆಸ್ಥಾನಕ್ಕೆ ಮಂತ್ರಿಯಾಗಿ ಸೇರಿದ. ವಾಲಿಯಿಂದ ಪದಚ್ಯುತನಾದ ಬಳಿಕ ಸುಗ್ರೀವ ಋಷ್ಯಮೂಕ ಬೆಟ್ಟಕ್ಕೆ ತೆರಳಿದ. ಹನುಮಂತ ಕಷ್ಟದ ಸಮಯದಲ್ಲಿ ರಾಜನಿಗೆ ನಿಷ್ಠನಾಗಿದ್ದ ಮತ್ತು ಪ್ರಬಲ ವಾಲಿಯ ದಾಳಿಯಿಂದ ಸುಗ್ರೀವನನ್ನು ರಕ್ಷಿಸಿದ.
ಸಂಕಷ್ಟದ ಸಮಯದಲ್ಲಿ ನಿಷ್ಠರಾಗಿ ತಮ್ಮೊಂದಿಗೆ ನಿಲ್ಲುವಂತಹ ಮಂತ್ರಿಗಳನ್ನು ಹೊಂದುವುದು ಒಬ್ಬ ರಾಜನಾದವನಿಗೆ ಎಷ್ಟು ಪ್ರಮುಖ ಎಂಬುದು ಈ ಸನ್ನಿವೇಶದಿಂದ ನಾವು ತಿಳಿದುಕೊಳ್ಳಬೇಕು.
ಋಷ್ಯಮೂಕ ಬೆಟ್ಟಕ್ಕೆ ಶ್ರೀರಾಮ ಮತ್ತು ಲಕ್ಷ್ಮಣನ ಭೇಟಿಯ ಉದ್ದೇಶದ ಬಗ್ಗೆ ವಿಚಾರಿಸಲು ಸುಗ್ರೀವನು ಹನುಮಂತನನ್ನು ಕಳುಹಿಸಿದಾಗ ಅವನು ಭಿಕ್ಷುಕನ ವೇಷದಲ್ಲಿ ಅವರನ್ನು ಭೇಟಿಯಾದ, ಇದು ಅವನ ಬೇಹುಗಾರಿಕೆ ಸಾಮರ್ಥ್ಯವನ್ನು ತೋರಿಸುತ್ತದೆ. ಅತ್ಯಂತ ಶಾಂತ, ಸಂಯೋಜಿತ ಮತ್ತು ಬುದ್ಧಿವಂತ ರೀತಿಯಲ್ಲಿ ಅವನು ಶ್ರೀರಾಮ ಮತ್ತು ಲಕ್ಷ್ಮಣರೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಿದ ಮತ್ತು ಅವರನ್ನು ಹೊಗಳಿದ. ಈ ಮೂಲಕ ಅವನು ಜನರ ಮನಸ್ಸನ್ನು ಅಳೆಯುವ ಸಾಮರ್ಥ್ಯವನ್ನು ತೋರಿಸಿದನು. ಶ್ರೀರಾಮ ಮತ್ತು ಲಕ್ಷ್ಮಣ ಇಬ್ಬರ ಮನಸ್ಸನ್ನು ಎಚ್ಚರಿಕೆಯಿಂದ ಓದಿದ ನಂತರ ಅವನು ತಮ್ಮ ನಿಜವಾದ ಗುರುತು ಮತ್ತು ಅವರನ್ನು ಭೇಟಿಯಾದ ಉದ್ದೇಶವನ್ನು ಬಹಿರಂಗಪಡಿಸಿದನು. ಹನುಮಂತನ ಮಾತು ಕೇಳಿದ ಶ್ರೀರಾಮನು ಮೊದಲು ಅವನನ್ನು ಹೊಗಳಿದ ಮತ್ತು ನಂತರ ಋಷ್ಯಮೂಕ ಬೆಟ್ಟಕ್ಕೆ ಬರಲು ಕಾರಣವೇನೆಂದು ಪ್ರಶ್ನಿಸಿದ. ಆಗ ಹನುಮಂತ ತನ್ನ ರಾಜತಾಂತ್ರಿಕ ಕುಶಾಗ್ರಮತಿಯನ್ನು ತೋರಿಸಿದ ಮತ್ತು ರಾಜ ಸುಗ್ರೀವ ಮತ್ತು ಶ್ರೀರಾಮನ ನಡುವಿನ ಸಂಭಾವ್ಯ ಮೈತ್ರಿಯ ಬಗ್ಗೆ ಊಹಿಸಿದ. ಆದ್ದರಿಂದ ಅವನು ರಾಮ-ಲಕ್ಷ್ಮಣರನ್ನು ಋಷ್ಯಮೂಕ ಬೆಟ್ಟದ ಸುಗ್ರೀವನ ಗುಹೆಗೆ ಕರೆದೊಯ್ದ, ಅಲ್ಲಿ ಅವರಿಬ್ಬರೂ ಸ್ನೇಹಿತರು ಮತ್ತು ಮಿತ್ರರಾದರು.
ಇದರಿಂದ ನಾವು ತಿಳಿದುಕೊಳ್ಳಬೇಕಾದುದು ಏನೆಂದರೆ ರಾಜತಾಂತ್ರಿಕನು ಪರಿಸ್ಥಿತಿಯನ್ನು ಓದುವಷ್ಟು ತೀಕ್ಷ್ಣವಾಗಿರಬೇಕು ಮತ್ತು ಅದಕ್ಕೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯವನ್ನು ಹೊಂದಿರಬೇಕು ಎಂದು. ಇಬ್ಬರು ಮಿತ್ರರು ಒಂದೇ ಗುರಿಗಳನ್ನು ಹೊಂದಿರುವುದು ಅನಿವಾರ್ಯವಲ್ಲ, ಆದರೆ ಶ್ರೀರಾಮ ಮತ್ತು ಸುಗ್ರೀವನಂತೆಯೇ ಅವರು ತಮ್ಮ ಗುರಿಗಳನ್ನು ಸಾಧಿಸಲು ಪರಸ್ಪರ ಸಹಾಯ ಮಾಡಬೇಕು.
ಲಂಕಾದಲ್ಲಿ ರಾಮದೂತನಾಗಿ ಹನುಮಂತ
ರಾಜ ಸುಗ್ರೀವ ಮತ್ತು ಶ್ರೀ ರಾಮರು ಹನುಮಂತನ ಸರ್ವಾಂಗೀಣ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ತಿಳಿದುಕೊಂಡು, ಅವನನ್ನು ದಕ್ಷಿಣ ದಿಕ್ಕು ಲಂಕಾಕ್ಕೆ ಕಳುಹಿಸಿ ಸೀತೆಯನ್ನು ಹುಡುಕುವ ಕಾರ್ಯ ನೀಡಿದರು. ಹನುಮಂತನ ಲಂಕಾ ಪ್ರಯಾಣವು ಪರೀಕ್ಷೆ, ಪ್ರಲೋಭನೆ ಮತ್ತು ಬೆದರಿಕೆಗಳನ್ನು ರಾಜತಾಂತ್ರಿಕರು ಎದುರಿಸಲು ಸಿದ್ಧರಾಗಿರಬೇಕು ಎಂಬುದನ್ನು ತಿಳಿಸುತ್ತದೆ.
ಹನುಮಂತನನ್ನು ಸುರಸ ಪರೀಕ್ಷಿಸಿದಳು ಮತ್ತು ಆತ ಅವಳಿಂದ ವರವನ್ನು ಪಡೆದನು. ಮೈನಾಕಾರಿಂದ ಪ್ರಲೋಭನೆ ಮತ್ತು ಅನುಕೂಲಗಳನ್ನು ಪಡೆದ, ಆದರೆ ಅದನ್ನು ಅವನು ಗೌರವದಿಂದ ಸ್ವೀಕರಿಸಲು ನಿರಾಕರಿಸಿದ ಮತ್ತು ತನ್ನ ಪ್ರಯಾಣವನ್ನು ಮುಂದುವರೆಸಿದ. ರಾಕ್ಷಸ ರಾಣಿ ಸಿಂಘಿಕಾ ಅವನನ್ನು ಕೊಲ್ಲಲು ಪ್ರಯತ್ನಿಸಿದಳು ಆದರೆ ಅವನು ಅವಳನ್ನು ಕೊಲ್ಲಲು ತನ್ನ ಬುದ್ಧಿವಂತಿಕೆ ಮತ್ತು ಶಕ್ತಿಯನ್ನು ಬಳಸಿದ. ರಾಜತಾಂತ್ರಿಕನು ಎಷ್ಟೇ ಒಳ್ಳೆಯ ಪ್ರಲೋಭನೆಗೆ ಒಳಗಾಗಿದ್ದರೂ ಎಂದಿಗೂ ಅದಕ್ಕೆ ಬೀಳಬಾರದು ಮತ್ತು ತನ್ನ ಗುರಿಗಳ ಮೇಲೆ ಕೇಂದ್ರೀಕರಿಸಬೇಕು ಎಂದು ಇಲ್ಲಿ ನಮಗೆ ತಿಳಿಯುತ್ತದೆ.
ತನ್ನ ಪ್ರಯಾಣವನ್ನು ಮುಗಿಸಿದ ನಂತರ ಹನುಮಂತ ಲಂಕಾವನ್ನು ತಲುಪಿದ ಮತ್ತು ಮತ್ತೊಮ್ಮೆ ತನ್ನ ಗೂಢಚಾರ ಕೌಶಲ್ಯವನ್ನು ತೋರಿಸಿದ. ಅವನು ತನ್ನ ಸ್ವರೂಪವನ್ನು ಬದಲಾಯಿಸಿದ ಮತ್ತು ಸತ್ವಗುಣದಿಂದ ತುಂಬಿದ ಹೃದಯದಿಂದ ಲಂಕಿಣಿಯನ್ನು ಶಿಕ್ಷಿಸಿದ ನಂತರ ಲಂಕೆಯನ್ನು ಪ್ರವೇಶಿಸಿದ. ರಾಜತಾಂತ್ರಿಕನು ಯಾವಾಗಲೂ ಶಾಂತಿ, ತಾಳ್ಮೆ ಮತ್ತು ಸಕಾರಾತ್ಮಕತೆಯಿಂದ ತುಂಬಿದ ಮನಸ್ಸಿನಿಂದವಿದೇಶಿ ನೆಲದಲ್ಲಿ ವಿನಂಬ್ರನಾಗಿ ಉಳಿಯಬೇಕು ಎಂಬ ಪಾಠವನ್ನು ಇಲ್ಲಿ ಹನುಮಂತ ನೀಡಿದ.
ಲಂಕಾದಲ್ಲಿ ಅವನು ವಾಸ್ತುಶಿಲ್ಪ, ಭದ್ರತಾ ವ್ಯವಸ್ಥೆಗಳು, ಜೀವನಶೈಲಿ ಮತ್ತು ಜನರ ನಡವಳಿಕೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ. ಮುಂದೆ ಅವನು ಸೀತೆಯನ್ನು ರಾವಣ ಬಂಧಿಸಿಟ್ಟಿದ್ದ ಅಶೋಕ ವಾಟಿಕಾವನ್ನು ಪ್ರವೇಶಿಸಿದ. ಅಶೋಕ ವಾಟಿಕಾದಲ್ಲಿ ಅವನು ಮರದ ಮೇಲೆ ಅಡಗಿಕೊಂಡು ಸೀತೆ ಮತ್ತು ವಾಟಿಕಾದ ಇತರ ಚಟುವಟಿಕೆಗಳನ್ನು ವೀಕ್ಷಿಸಿದ. ನಂತರ, ಹನುಮಂತ ಸೀತೆಯೊಂದಿಗೆ ಯಾವ ಭಾಷೆಯಲ್ಲಿ ಸಂವಾದವನ್ನು ಪ್ರಾರಂಭಿಸಬೇಕು ಎಂದು ಯೋಚಿಸಿದ, ಎಡವಿದರೆ ಸೀತಾ ಮಾತೆ ಭಯಭೀತಳಾಗಿ ಶ್ರಮ ವ್ಯರ್ಥವಾಗುತ್ತದೆ ಎಂಬುದು ಆತನಿಗೆ ತಿಳಿದಿತ್ತು.
ವಿದೇಶಿ ಭೂಮಿಯಲ್ಲಿರುವ ಜನರೊಂದಿಗೆ ವಿಶೇಷವಾಗಿ ತನ್ನ ರಾಷ್ಟ್ರದ ಹಿತಾಸಕ್ತಿಯನ್ನು ರಕ್ಷಿಸಲು ಸಂವಹನ ನಡೆಸುವಾಗ ರಾಜತಾಂತ್ರಿಕ ಅಥವಾ ಗೂಢಚಾರರು ಬಹಳ ಜಾಗರೂಕರಾಗಿರಬೇಕು ಎಂದು ನಾವು ಈ ಸನ್ನಿವೇಶದಿಂದ ಕಲಿತುಕೊಳ್ಳಬಹುದು. ಒಬ್ಬರು ತಮ್ಮ ಸುರಕ್ಷತೆ ಮತ್ತು ಸುರಕ್ಷತೆಯ ಬಗ್ಗೆ ಜಾಗರೂಕರಾಗಿರಬೇಕು.
ಸೀತೆಯನ್ನು ಭೇಟಿಯಾಗಿ ಶ್ರೀರಾಮನ ಸಂದೇಶವನ್ನು ನೀಡಿದ ನಂತರ, ಹನುಮಂತ ರಾವಣನ ಯುದ್ಧ ತಂತ್ರಗಳು ಮತ್ತು ಸನ್ನದ್ಧತೆಯನ್ನು ಪರಿಶೀಲಿಸಲು ನಿರ್ಧರಿಸಿದ. ಇದಕ್ಕಾಗಿ ಅವನು ಅಶೋಕ ವಾಟಿಕಾದ ಬಹುಭಾಗವನ್ನು ನಾಶಪಡಿಸಿದ ಮತ್ತು ರಾವಣನ ಅನೇಕ ಸೈನಿಕರು ಮತ್ತು ಸೇನಾಪತಿಗಳನ್ನು ಕೊಂದ. ರಾವಣನನ್ನು ಭೇಟಿಯಾಗಲು ಮತ್ತು ಸೀತೆಯನ್ನು ಬಂಧ ಮುಕ್ತಗೊಳಿಸು ಇಲ್ಲವೇ ಯುದ್ಧಕ್ಕೆ ಸಿದ್ಧನಾಗು ಎಂಬ ಶ್ರೀರಾಮ ಮತ್ತು ಸುಗ್ರೀವನ ಸಂದೇಶವನ್ನು ಆತನಿಗೆ ನೀಡಲು ಹನುಮಂತ ಮೇಘನಾದ್ ಕೈ ಸಿಕ್ಕಿಬಿದ್ದ. ರಾವಣ ಮತ್ತು ಅವನ ಮಂತ್ರಿಗಳ ಮಾನಸಿಕ ಸ್ಥಿತಿ, ಸಾಮರ್ಥ್ಯಗಳು ಮತ್ತು ಜ್ಞಾನವನ್ನು ಅಳೆಯಲು ಅವನು ಬಳಸಿದ ಈ ತಂತ್ರ ಒಂದು ಉದಾಹರಣೆಯಾಗಿದೆ.
ರಾಜತಾಂತ್ರಿಕ ಪ್ರತಿರಕ್ಷೆಯು ಹೊಸ ಪರಿಕಲ್ಪನೆಯಲ್ಲ, ಆದರೆ ಶಾಸ್ತ್ರಗಳ ಪ್ರಕಾರ ಪ್ರಾಚೀನ ಭಾರತೀಯ ಆಚರಣೆ ಎಂದು ನಾವು ಇಲ್ಲಿ ಕಲಿಯುತ್ತೇವೆ. ರಾವಣನು ಹನುಮಂತನಿಗೆ ಮರಣದಂಡನೆ ವಿಧಿಸುವ ಮೂಲಕ ಆತನನ್ನು ಶಿಕ್ಷಿಸಲು ಬಯಸಿದನು ಆದರೆ ಮಂತ್ರಿ ಮತ್ತು ರಾವಣನ ಕಿರಿಯ ಸಹೋದರ ವಿಭೀಷಣ ಶಾಸ್ತ್ರಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ಹಾಗೆ ಮಾಡುವುದನ್ನು ತಡೆದನು ಮತ್ತು ಹನುಮಂತನಿಗೆ ಇನ್ನೊಂದು ರೀತಿಯ ಶಿಕ್ಷೆಯನ್ನು ನೀಡುವಂತೆ ಸೂಚಿಸಿದನು.
ಹನುಮಂತ ಈ ಅವಕಾಶವನ್ನು ಬಳಸಿಕೊಂಡ ಮತ್ತು ಲಂಕಾವನ್ನು ಸುಟ್ಟುಹಾಕಿದ ಮತ್ತು ಅವರ ಆಸ್ತಿಯನ್ನು ಹಾನಿಗೊಳಿಸಿದ. ನಂತರ ತನ್ನ ಗುಂಪಿನೊಂದಿಗೆ ಋಷ್ಯಮೂಕ ಬೆಟ್ಟಕ್ಕೆ ಹಿಂದಿರುಗಿದ, ಸೀತಾ ಮಾತೆಯನ್ನು ಹುಡುಕುವ ಮತ್ತು ಲಂಕಾವನ್ನು ದೊಡ್ಡ ಪ್ರಮಾಣದಲ್ಲಿ ನಾಶಮಾಡುವ ತನ್ನ ಕಾರ್ಯಾಚರಣೆಯ ಯಶಸ್ಸಿನ ಬಗ್ಗೆ ಸುಗ್ರೀವ ಮತ್ತು ಶ್ರೀರಾಮನಿಗೆ ಹೇಳಿದ. ಸರ್ಕಾರವು ತನ್ನ ಶತ್ರುಗಳನ್ನು ಹಿಮ್ಮೆಟ್ಟಿಸಲು ಮತ್ತು ರಾಷ್ಟ್ರದ ಹಿತಾಸಕ್ತಿಗಳನ್ನು ಭದ್ರಪಡಿಸಲು ಲೆಕ್ಕಾಚಾರದ ರೀತಿಯಲ್ಲಿ ಬಲವನ್ನು ಬಳಸುವ ಕಲೆಯನ್ನು ತಿಳಿದಿರಬೇಕು ಎಂದು ನಾವು ಈ ಸನ್ನಿವೇಶದಿಂದ ಕಲಿಯಬಹುದು.
ಕೊನೆಯದಾಗಿ ಹೇಳಲು ಬಯಸುವುದೇನೆಂದರೆ, ಹೊರಗಿನವರಿಗಿಂತ ಹೆಚ್ಚಾಗಿ ನಾವು ನಮ್ಮ ಸ್ವಂತ ಇತಿಹಾಸ ಮತ್ತು ವೇದಗಳನ್ನು ನಮ್ಮ ಸಮಸ್ಯೆಗಳು ಮತ್ತು ಸವಾಲುಗಳಿಗೆ ಪಾಠ ಮತ್ತು ಪರಿಹಾರಗಳಿಗಾಗಿ ನೋಡಬೇಕು. ಭಾರತವು ತನ್ನದೇ ಆದ ಬೇರುಗಳನ್ನು ನಿರ್ಲಕ್ಷಿಸಿ ವಿಶ್ವಗುರು ಮತ್ತು ವಿಶ್ವಶಕ್ತಿಯಾಗಲು ಸಾಧ್ಯವಿಲ್ಲ.
ಕೃಪೆ: www.esamskriti.com
https://www.esamskriti.com/e/Culture/Indian-Culture/Hanumanji-was-an-Ideal-Diplomat-Minister-and-Spy-1.aspx
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.