ನವದೆಹಲಿ: ಅಮೆರಿಕಾ ಪ್ರವಾಸದಲ್ಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರಪೀಟರ್ಸನ್ ಇನ್ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಶನಲ್ ಎಕನಾಮಿಕ್ಸ್ (PIIE) ನಲ್ಲಿ ಭಾರತದ ಆರ್ಥಿಕತೆಯ ಸ್ಥಿತಿಸ್ಥಾಪಕತ್ವ ಮತ್ತು ಬೆಳವಣಿಗೆಯ ಬಗೆಗಿನ ಚರ್ಚೆಯಲ್ಲಿ ಪಾಲ್ಗೊಂಡು ಭಾರತದ ಬಗೆಗಿನ ನಕಾರಾತ್ಮಕ ಪಾಶ್ಚಾತ್ಯ `ಗ್ರಹಿಕೆ’ಗೆ ಸೂಕ್ತ ಉತ್ತರವನ್ನು ನೀಡಿದರು.
“ನಾಕಾರಾತ್ಮಕ ಗ್ರಹಿಕೆಗೆ ಉತ್ತರ ಭಾರತಕ್ಕೆ ಬರುತ್ತಿರುವ ಹೂಡಿಕೆದಾರರ ಬಳಿ ಇದೆ ಎಂದು ನಾನು ಭಾವಿಸುತ್ತೇನೆ. ಹೂಡಿಕೆಗಳನ್ನು ಸ್ವೀಕರಿಸಲು ಆಸಕ್ತಿ ಹೊಂದಿರುವವರಾಗಿ ಭಾರತದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡೋಣ ಬನ್ನಿ ಎಂದು ನಾನು ಹೇಳುತ್ತೇನೆ. ಭಾರತದ ನೆಲಕ್ಕೆ ಮೇಲೆ ಭೇಟಿ ನೀಡದೆ ವರದಿಗಳನ್ನು ತಯಾರಿಸುವ ಜನರು ನಿರ್ಮಿಸುವ ಗ್ರಹಿಕೆಗಳನ್ನು ಕೇಳುವುದಕ್ಕಿಂತ ಹೆಚ್ಚಾಗಿ, ಭಾರತದಲ್ಲಿ ಹೂಡಿಕೆ ಅಥವಾ ಬಂಡವಾಳದ ಹರಿವಿನ ಮೇಲೆ ಪರಿಣಾಮ ಬೀರುವ ಗ್ರಹಿಕೆಗಳ ಕುರಿತು ಕೇಳುವುದು ಒಳಿತು” ಎಂದು PIIE ಅಧ್ಯಕ್ಷ ಆಡಮ್ ಎಸ್ ಪೋಸೆನ್ ಅವರಿಗೆ ಪ್ರತಿಕ್ರಿಯಿಸುವಾಗ ಸೀತಾರಾಮನ್ ಹೇಳಿದ್ದಾರೆ.
ವಿರೋಧ ಪಕ್ಷದ ಸಂಸದರು ಸ್ಥಾನಮಾನ ಕಳೆದುಕೊಳ್ಳುವ ಬಗ್ಗೆ ಪಾಶ್ಚಿಮಾತ್ಯ ಪತ್ರಿಕೆಗಳಲ್ಲಿ ವ್ಯಾಪಕ ವರದಿಯಾಗುತ್ತಿದೆ ಮತ್ತು ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರು ಹಿಂಸಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂದು ಪೊಸೇನ್ ಸೀತಾರಾಮನ್ ಅವರನ್ನು ಪ್ರಶ್ನಿಸಿದ್ದಾರೆ.
“ಭಾರತವು ವಿಶ್ವದಲ್ಲಿ ಎರಡನೇ ಅತಿ ದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ, ಮತ್ತು ಆ ಜನಸಂಖ್ಯೆಯು ಸಂಖ್ಯೆಯಲ್ಲಿ ಮಾತ್ರ ಬೆಳೆಯುತ್ತಿದೆ. ಅವರ ಜೀವನವು ಕಷ್ಟಕರವಾಗಿರುತ್ತದೆ ಅಥವಾ ಸರ್ಕಾರದ ಬೆಂಬಲ ಅದಕ್ಕೆ ದೊರಕದೇ ಹೋಗಿರುತ್ತಿದ್ದರೆ ಭಾರತದಲ್ಲಿ ಅವರ ಸಂಖ್ಯೆ ವೃದ್ಧಿ ಸಂಭವಿಸುತ್ತದೆಯೇ” ಎಂದು ಹಣಕಾಸು ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.