ನವದೆಹಲಿ: 2047ರ ವೇಳೆಗೆ ಅಂದರೆ ಭಾರತವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ವೇಳೆಗೆ ಭಾರತದ ವಿದ್ಯುತ್ನ ಶೇ.9ರಷ್ಟು ಅಂದರೆ ಹತ್ತನೇ ಒಂದರಷ್ಟು ಪಾಲು ನ್ಯೂಕ್ಲಿಯರ್ ಮೂಲಗಳಿಂದ ಬರುತ್ತದೆ ಎಂದು ಕೇಂದ್ರ ಪರಮಾಣು ಇಂಧನ ಮತ್ತು ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಭಾನುವಾರ ಮುಂಬೈನಲ್ಲಿ ಅಣುಶಕ್ತಿ ಇಲಾಖೆಯ ಭಾಭಾ ಪರಮಾಣು ಸಂಶೋಧನಾ ಕೇಂದ್ರದ (BARC) ಹಿರಿಯ ವಿಜ್ಞಾನಿಗಳ ಗುಂಪಿನೊಂದಿಗೆ ಪರಿಶೀಲನಾ ಸಭೆ ನಡೆಸಿದ ನಂತರ ಸಚಿವ ಸಿಂಗ್ ಈ ಹೇಳಿಕೆಗಳನ್ನು ನೀಡಿದರು.
ಭಾರತವು 500 GW ಪಳೆಯುಳಿಕೆ ರಹಿತ ವಿದ್ಯುಚ್ಛಕ್ತಿ ಸಾಮರ್ಥ್ಯವನ್ನು ತಲುಪಲು ಬದ್ಧವಾಗಿದೆ, ನವೀಕರಿಸಬಹುದಾದ ಇಂಧನಗಳಿಂದ ಅರ್ಧದಷ್ಟು ಶಕ್ತಿಯ ಅವಶ್ಯಕತೆಗಳನ್ನು ಉತ್ಪಾದಿಸಲಿದೆ ಮತ್ತು 2030 ರ ವೇಳೆಗೆ 1 ಶತಕೋಟಿ ಟನ್ಗಳಷ್ಟು ಹೊರಸೂಸುವಿಕೆಯನ್ನು ಕಡಿಮೆ ಮಾಡಲಿದೆ ಎಂದರು.
ಅಲ್ಲದೇ 2030 ರ ವೇಳೆಗೆ ಪರಮಾಣು ಶಕ್ತಿ ಉತ್ಪಾದನೆಯ 20-ಗಿಗಾವ್ಯಾಟ್ ಸಾಮರ್ಥ್ಯವನ್ನು ಸಾಧಿಸುತ್ತದೆ, ಇದು ಯುಎಸ್ ಮತ್ತು ಫ್ರಾನ್ಸ್ ನಂತರ ಪರಮಾಣು ಶಕ್ತಿಯ ಮೂರನೇ ಅತಿದೊಡ್ಡ ಉತ್ಪಾದಕನಾಗಿ ಭಾರತವನ್ನು ಪ್ರಮುಖ ಸ್ಥಾನದಲ್ಲಿ ಇರಿಸುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.