ಬೆಂಗಳೂರು: ಕರ್ನಾಟಕ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ನಡೆಸಿದ್ದಾರೆ. ಸುಮಾರು 2 ಗಂಟೆಗಳ ಕಾಲ ಇಂದು ಬೆಳ್ಳಂಬೆಳಗ್ಗೆ ಸಫಾರಿ ನಡೆಸಿದ ಪ್ರಧಾನಿ ಬಂಡೀಪುರ ಕ್ಯಾಂಪ್ ನ, ವನ್ಯಜೀವಿಗಳ ಸೌಂದರ್ಯ ಸವಿದರು.
ಸಫಾರಿಗೆ ಸೂಕ್ತವಾಗುವ ವಿಶೇಷ ಉಡುಪನ್ನು ತೊಟ್ಟು ಪ್ರಧಾನಿ ಮೋದಿ ಸಫಾರಿ ಮಾಡಿದ್ದು, ಫೋಟೋ, ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಬಂಡೀಪುರಕ್ಕೆ ಪ್ರಧಾನಿಯೊಬ್ಬರು ಬರುತ್ತಿರುವುದು ಇದೇ ಮೊದಲಾಗಿದ್ದು ಹುಲಿ ಸಂರಕ್ಷಣೆ ಯೋಜನೆಯ ಸುವರ್ಣ ಸಂಭ್ರಮದಲ್ಲಿ ವಿಶೇಷವಾಗಿದೆ.
ಇಂದು ಮೈಸೂರು, ಚಾಮರಾಜನಗರಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಹಾಗೂ ಹುಲಿ ಸಂರಕ್ಷಣೆ ಯೋಜನೆಯ ಸುವರ್ಣ ಸಂಭ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ವಿದೇಶಗಳ ಆಹ್ವಾನಿತರು, ಅರಣ್ಯಾಧಿಕಾರಿಗಳು, ಅರಣ್ಯ ಮತ್ತು ಹುಲಿ ಸಂರಕ್ಷಣೆಯಲ್ಲಿ ತೊಡಗಿರುವವರು ಪಾಲ್ಗೊಳ್ಳಲಿದ್ದಾರೆ.
ಹೈದರಾಬಾದ್ ಮತ್ತು ಚೆನ್ನೈನ ಕಾರ್ಯಕ್ರಮಗಳ ನಂತರ ಮೈಸೂರಿಗೆ ಬಂದಿರುವೆ. ನಾಳೆ ಏಪ್ರಿಲ್ ೯, ಪ್ರಾಜೆಕ್ಟ್ ಟೈಗರ್ ನ ೫೦ ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸುವೆ. https://t.co/0r5JZM6ewy
— Narendra Modi (@narendramodi) April 8, 2023
WATCH | Glimpses of PM @narendramodi's visit to Bandipur Tiger Reserve.@PMOIndia @moefcc @Bandipur_TR @byadavbjp pic.twitter.com/4aPLBGV3WI
— PB-SHABD (@PBSHABD) April 9, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.