ಲಡಾಖ್: ಪ್ರವಾಸಿ ಆಕರ್ಷಣೆಯಾಗಿರುವ ಲಡಾಖ್ ತನ್ನ ಪ್ರಾಚೀನ ವೈಭವಕ್ಕೂ ಹೆಸರುವಾಸಿಯಾಗಿದೆ. ಅಲ್ಲಿನ ಕಲೆ, ಸಂಸ್ಕೃತಿ ಮತ್ತು ಕರಕುಶಲತೆಯು ಈ ಸ್ಥಳಕ್ಕೆ ವಿಶಿಷ್ಟವಾದ ಗುರುತನ್ನು ನೀಡುತ್ತದೆ. ಲಡಾಖ್ನ ಕಲೆ ಮತ್ತು ಕರಕುಶಲ ಕಲೆಗಳಿಗೆ ಒಂದು ಭವ್ಯವಾದ ಮೆರುಗು ದೊರೆತಿರುವುದು ಅಲ್ಲಿನ ಮರದ ಕೆತ್ತನೆಯಿಂದ, ಇದು ಶತಮಾನಗಳಿಂದಲೂ ಹರಿದು ಬಂದ ಕಲೆ ಮತ್ತು ಅಮೂಲ್ಯವಾದ ಸಾಂಸ್ಕೃತಿಕ ಪರಂಪರೆಯ ಸಾಧನವಾಗಿ ಪೀಳಿಗೆಯಿಂದ ಪೀಳಿಗೆಗೆ ರವಾನೆಗೊಂಡಿದೆ.
ಇದೀಗ ಲಡಾಖ್ ಮರದ ಕೆತ್ತನೆ ಜಿಐ ಟ್ಯಾಗ್ ಪಡೆದುಕೊಂಡಿದೆ. ಈ ಕಲೆಯ ಪ್ರಾಮುಖ್ಯತೆ, ಅನನ್ಯತೆ ಮತ್ತು ಸಾಟಿಯಿಲ್ಲದ ಕರಕುಶಲತೆಗೆ ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಅನ್ನು ನೀಡಲಾಗಿದೆ. ಈ ಮೂಲಕ ಜಿಐ ಪಡೆದ ಮೊದಲ ಸ್ಥಳೀಯ ಕಲೆ ಎಂಬ ಮನ್ನಣೆಯನ್ನು ಗಳಿಸಿದೆ. ಲಡಾಖ್ನಲ್ಲಿ ಶಿಂಕೋಸ್ ಎಂದು ಕರೆಯಲ್ಪಡುವ ಮರದ ಕೆತ್ತನೆಯು ಕರಕುಶಲ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಕಲೆಯಾಗಿದೆ.
ಮರದ ಕೆತ್ತನೆಯ ಕರಕುಶಲತೆಯು ಜೀವನದ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳ ಅವಿಭಾಜ್ಯ ಅಂಗವಾಗಿದೆ.
ಕಟ್ಟಡಗಳ ವಾಸ್ತುಶೈಲಿಯಿಂದ ಮಠಗಳು, ಮಸೀದಿಗಳು ಮತ್ತು ಚರ್ಚುಗಳಂತಹ ಪೂಜಾ ಸ್ಥಳಗಳ ಸೌಂದರ್ಯದ ಮೌಲ್ಯವನ್ನು ವರ್ಧಿಸುವವರೆಗೆ ಗೃಹಾಲಂಕಾರದವರೆಗೆ, ಮರದ ಕೆತ್ತನೆಯು ಪ್ರದೇಶದ ಸೌಂದರ್ಯಶಾಸ್ತ್ರದಲ್ಲಿ ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.