ಗಾಂಧಿನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಹನುಮ ಜಯಂತಿಯಂದು ಗುಜರಾತ್ನ ಬೊಟಾಡ್ ಜಿಲ್ಲೆಯ ಸಲಾಂಗ್ಪುರ ಪಟ್ಟಣದಲ್ಲಿ 54 ಅಡಿ ಎತ್ತರದ ಹನುಮಾನ್ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಅಲ್ಲದೇ ಒಂದೇ ಬಾರಿಗೆ ಸುಮಾರು 4 ಸಾವಿರ ಯಾತ್ರಾರ್ಥಿಗಳಿಗೆ ಸೇವೆ ಸಲ್ಲಿಸಬಹುದಾದ ದೇವಾಲಯದ ಹೊಸ ಸಮುದಾಯ ಅಡುಗೆಮನೆಯನ್ನು ಶಾ ಇಂದು ಉದ್ಘಾಟಿಸಿದರು.
ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶಾ, ಬಿಜೆಪಿ ಆಳ್ವಿಕೆಯಲ್ಲಿ ಭಾರತೀಯ ಸಂಸ್ಕೃತಿಯ ಧ್ವಜವನ್ನು ವಿಶ್ವದಲ್ಲಿ ಎತ್ತರಕ್ಕೆ ಏರಿಸಲಾಗಿದೆ. ಕಾಶಿ, ಸೋಮನಾಥ ಸೇರಿದಂತೆ ದೇಶದ ಎಲ್ಲಾ ಪ್ರಮುಖ ಯಾತ್ರಾ ಕೇಂದ್ರಗಳು ಬಿಜೆಪಿ ಆಡಳಿತದಲ್ಲಿ ಪುನರಾಭಿವೃದ್ಧಿಯಾಗಿವೆ ಎಂದರು.
ಸಚಿವರು ತಮ್ಮ ಕುಟುಂಬದೊಂದಿಗೆ ಸಲಾಂಗ್ಪುರದಲ್ಲಿ ಹನುಮಾನ್ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.