ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ವಾಯುಪಡೆ ಶೀಘ್ರದಲ್ಲೇ S-400 ವಾಯು ರಕ್ಷಣಾ ವ್ಯವಸ್ಥೆಯ ಕ್ಷಿಪಣಿಗಳ ಮೊದಲ ಗುಂಡಿನ ದಾಳಿ ಪರೀಕ್ಷೆಯನ್ನು ನಡೆಸಲಿದೆ. ದೀರ್ಘ-ಶ್ರೇಣಿಯ ವಾಯು ರಕ್ಷಣಾ ವ್ಯವಸ್ಥೆ S-400ರ ಮೊದಲ ಎರಡು ಸ್ಕ್ವಾಡ್ರನ್ಗಳನ್ನು ಈಗಾಗಲೇ ಕಾರ್ಯಗತಗೊಳಿಸಲಾಗಿದೆ ಎಂಬುದು ಗಮನಾರ್ಹ ವಿಷಯ.
ಭಾರತೀಯ ಪಡೆಗಳು ಈ ರಷ್ಯಾದ ಮೂಲದ ಕ್ಷಿಪಣಿ ವ್ಯವಸ್ಥೆಯ ಗುಂಡಿನ ದಾಳಿಯನ್ನು ರಷ್ಯಾದಲ್ಲಿ ನಡೆಸಿದೆ. ಆದರೆ ಭಾರತದಲ್ಲಿ ನಡೆಸುತ್ತಿರುವುದು ಇದೇ ಮೊದಲು.
“ವೇಗವಾಗಿ ಚಲಿಸುವ ವೈಮಾನಿಕ ಗುರಿಯ ವಿರುದ್ಧ ಸಣ್ಣ ಅಥವಾ ಮಧ್ಯಮ ಶ್ರೇಣಿಯ ಕ್ಷಿಪಣಿಗಳಲ್ಲಿ ಒಂದನ್ನು ಬಳಸಿಕೊಂಡು ಶೀಘ್ರದಲ್ಲೇ ಗುಂಡಿನ ದಾಳಿ ನಡೆಸಲು ಯೋಜಿಸಲಾಗಿದೆ” ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯು ವಿಭಿನ್ನ ಶ್ರೇಣಿಯ ಕ್ಷಿಪಣಿಗಳನ್ನು ಹೊಂದಿದ್ದು ಅದು ವೇಗವಾಗಿ ಚಲಿಸುವ ಫೈಟರ್ ಜೆಟ್ಗಳು ಅಥವಾ ಕ್ರೂಸ್ ಕ್ಷಿಪಣಿಗಳನ್ನು ಗರಿಷ್ಠ 400 ಕಿಮೀ ವ್ಯಾಪ್ತಿಯಲ್ಲಿ ಹೊಡೆದುರುಳಿಸಬಲ್ಲದು.
S-400 ವಾಯು ರಕ್ಷಣಾ ಕ್ಷಿಪಣಿಗಳ ಐದು ಸ್ಕ್ವಾಡ್ರನ್ಗಳಿಗೆ ಭಾರತ ಮತ್ತು ರಷ್ಯಾ 35,000 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿವೆ ಮತ್ತು ಎಲ್ಲಾ ವಿತರಣೆಗಳು 2023-24 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಆದರೆ ಈ ಕಾಲಮಿತಿಯಲ್ಲಿ ವಿಳಂಬವಾಗಬಹುದು ಎಂದು ಮೂಲಗಳು ತಿಳಿಸಿವೆ.
The #IAF will soon testfire the new S-400 AD system against a fast-moving target
Russia has delivered the 3rd squadron of S-400 to India. #Russia will deliver all 5 regiments of S-400 to India by late 2023.
India has already conducted some tests of #S400 in Russia.#IADN pic.twitter.com/EudWiNOCJy
— News IADN (@NewsIADN) April 5, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.