ಬೆಂಗಳೂರು: 2022-23ರ ಹಣಕಾಸು ವರ್ಷದಲ್ಲಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಅತ್ಯಧಿಕ ಆದಾಯವನ್ನು ದಾಖಲಿಸಿದೆ.
ಹಿಂದಿನ ವರ್ಷ 24,620 ಕೋಟಿ ರೂಪಾಯಿಗಳ ಆದಾಯ ದಾಖಲಿಸಿದ್ದ ಎಚ್ಎಎಲ್ 2022-23ನೇ ಹಣಕಾಸು ವರ್ಷದಲ್ಲಿ ಸುಮಾರು 26,500 ಕೋಟಿ ರೂಪಾಯಿಗಳ (ತಾತ್ಕಾಲಿಕ ಮತ್ತು ಲೆಕ್ಕಪರಿಶೋಧನೆಯಿಲ್ಲದ) ಆದಾಯವನ್ನು ದಾಖಲಿಸಿದೆ.
“ಭೌಗೋಳಿಕ-ರಾಜಕೀಯ ಸನ್ನಿವೇಶಗಳಿಂದಾಗಿ ಪೂರೈಕೆ ಸರಪಳಿಯ ಅಡೆತಡೆಗಳ ಸವಾಲುಗಳ ಹೊರತಾಗಿಯೂ, ಕಂಪನಿಯು ಉನ್ನತ ಸಾಲಿನಲ್ಲಿ ಉದ್ದೇಶಿತ ಬೆಳವಣಿಗೆಯನ್ನು ಸಾಧಿಸುತ್ತಿದೆ. ಸ್ವದೇಶಿಕರಣದ ಮೇಲಿನ ಹೆಚ್ಚಿದ ಒತ್ತು ಮತ್ತು ಲಭ್ಯವಿರುವ ದಾಸ್ತಾನುಗಳಿಂದ ಇದು ಸಾಧ್ಯವಾಗಿದೆ” ಎಂದು ಎಚ್ಎಎಲ್ ಸಿಎಂಡಿ ಸಿ ಬಿ ಅನಂತಕೃಷ್ಣನ್ ಹೇಳಿದ್ದಾರೆ.
ಈ ವರ್ಷದಲ್ಲಿ, ಕಂಪನಿಯು 70 HTT -40, 6 Do-228 ಏರ್ಕ್ರಾಫ್ಟ್ ಮತ್ತು PSL V ಉಡಾವಣಾ ವಾಹನಗಳ ಉತ್ಪಾದನಾ ಒಪ್ಪಂದಗಳನ್ನು ಒಳಗೊಂಡಂತೆ ಸುಮಾರು ರೂ 26,000 ಕೋಟಿಯ ಹೊಸ ಒಪ್ಪಂದಗಳನ್ನು ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.