ನವದೆಹಲಿ: ಈ ವಾರ ಕೆನಡಾದಲ್ಲಿರುವ ಭಾರತದ ರಾಜತಾಂತ್ರಿಕ ಮಿಷನ್ ಮತ್ತು ಕಾನ್ಸುಲೇಟ್ಗಳ ಮೇಲೆ ಪ್ರತ್ಯೇಕತಾವಾದಿ ಮತ್ತು ಉಗ್ರಗಾಮಿ ಅಂಶಗಳ ದಾಳಿ ನಡೆಸಿರುವ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಲು ಭಾನುವಾರ ಕೆನಡಾದ ಹೈಕಮಿಷನರ್ಗೆ ಭಾರತ ಸಮನ್ಸ್ ನೀಡಿದೆ ಎಂದು ವಿದೇಶಾಂಗ ಸಚಿವಾಲಯ ಇಂದು ತಿಳಿಸಿದೆ.
ಪೊಲೀಸರ ಸಮ್ಮುಖದಲ್ಲಿ ರಾಜತಾಂತ್ರಿಕ ಮಿಷನ್ ಮತ್ತು ಕಾನ್ಸುಲೇಟ್ಗಳ ಭದ್ರತೆಯನ್ನು ಉಲ್ಲಂಘಿಸಲು ಇಂತಹ ಅಂಶಗಳಿಗೆ ಹೇಗೆ ಅನುವು ನೀಡಲಾಯಿತು ಎಂಬುದರ ಕುರಿತು ಸರ್ಕಾರ ವಿವರಣೆಯನ್ನು ಕೇಳಿದೆ.
ಕೆನಡಾದ ಸರ್ಕಾರಕ್ಕೆ ವಿಯೆನ್ನಾ ಕನ್ವೆನ್ಷನ್ ಅಡಿಯಲ್ಲಿ ತನ್ನ ಬಾಧ್ಯತೆಗಳನ್ನು ನೆನಪಿಸಿಕೊಡಲಾಗಿದೆ ಮತ್ತು ಈಗಾಗಲೇ ಅಂತಹ ಕೃತ್ಯಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಸೂಚಿಲಾಗಿದೆ ಎಂದು ಸಚಿವಾಲಯದ ಮೂಲಗಳು ಮಾಹಿತಿ ನೀಡಿದೆ.
ರಾಜತಾಂತ್ರಿಕರ ಸುರಕ್ಷತೆ ಮತ್ತು ರಾಜತಾಂತ್ರಿಕ ಆವರಣದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕೆನಡಾ ಸರ್ಕಾರವು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಿರೀಕ್ಷೆ ವ್ಯಕ್ತಪಡಿಸಿದೆ, ಇದರಿಂದಾಗಿ ಮಾತ್ರ ಅವರು ತಮ್ಮ ಸಾಮಾನ್ಯ ರಾಜತಾಂತ್ರಿಕ ಕಾರ್ಯಗಳನ್ನು ಪೂರೈಸಲು ಸಾಧ್ಯ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.