ಸುಬ್ರಹ್ಮಣ್ಯ: ಭಾಷೆ ಯಾವುದೇ ಇರಲಿ, ಅದು ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ.ಹೀಗಾಗಿ ಎಲ್ಲಾ ಭಾಷೆಯನ್ನು ಪ್ರೀತಿಸುವ ಗೂನ ಬೆಳೆಸಿಕೊಳ್ಳಬೇಕು, ಅದರ ಜೊತೆಗೆ ರಾಷ್ಟ್ರೀಯ ಭಾಷೆ ಎನಿಸಿದ ಹಿಂದಿಗೂ ಆದ್ಯತೆ ನೀಡಬೇಕು, ಅದು ಸಂವಹನ ಭಾಷೆಯಾಗಲಿ ಎಂದು ನಿವೃತ್ತ ಶಿಕ್ಷಕಿ ರಾಜೇಶ್ವರಿ ಹೇಳಿದರು.
ಅವರು ಗುತ್ತಿಗಾರು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಶನಿವಾರ ನೆಹರು ಯುವಕೇಂದ್ರ ಹಾಗೂ ಗುತ್ತಿಗಾರು ಯುವಕ ಮಂಡಲ ಸಹಯೋಗದೊಂದಿಗೆ ನಡೆದ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದಿ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಬೇಕು ಎಂಬ ಬೇಡಿಕೆ ಇತ್ತು,ಈ ಪ್ರಸ್ತಾಪ ಅಂದಿನಿಂದಲೇ ಇತ್ತು.ಹಾಗೆಂದು ಇತರ ಭಾಷೆಗಳನ್ನು ದ್ವೇಷಿಸಬೇಕು ಎಂದಲ್ಲ, ಸುಲಲಿತ ಆಡಳಿತಕ್ಕೆ ಒಂದೇ ಭಾಷೆಯಾದರೆ ಎಲ್ಲಾ ಜನರಿಗೂ ಉತ್ತಮವಾಗಿದೆ. ಅದರ ಜೊತೆಗೆ ರಾಜ್ಯ ಭಾಷೆ, ಪ್ರಾದೇಶೀಕ ಭಾಷೆ, ಸ್ಥಳೀಯ ಭಾಷೆಗಳೂ ಇವೆ.ಇದಕ್ಕೆಲ್ಲಾ ಸಮಾನ ಆದ್ಯತೆ ನೀಡಬೇಕಾಗಿದೆ.ಈ ಮೂಲಕ ನಮ್ಮ ಸಂಸ್ಕೃತಿಗೆ ಆದ್ಯತೆ ನೀಡಬೇಕಾಗಿದೆ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಸುಮಿತ್ರಾ ಎಂಕೆ ಮಾತನಾಡಿ,ಇಂದಿನ ಸಂವಹನ ಮಾಧ್ಯಮಗಳ ಕಾರಣದಿಂದ ಎಲ್ಲಾ ಭಾಷೆಗಳೂ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ.ಹೀಗಾಗಿ ಎಲ್ಲಾ ಭಾಷೆಗಳಿಗೂ ಸಮಾನ ಆದ್ಯತೆ ಅಗತ್ಯವಾಗಿದೆ ಎಂದರು.
ಗುತ್ತಿಗಾರು ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ನೆಲ್ಸನ್ ಕ್ಯಾಸ್ಟಲಿನೋ, ಹಿಂದಿ ಶಿಕ್ಷಕ ಪ್ರಸನ್ನ ಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ಯುವಕ ಮಂಡಲ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ಯುವಜನ ಸಂಯುಕ್ತ ಮಂಡಳಿ ಗೌರವಾಧ್ಯಕ್ಷ ಶಿವಪ್ರಕಾಶ್ ಕಡಪಳ, ನೆಹರುಯುವ ಕೇಂದ್ರ ತಾಲೂಕು ಸಂಯೋಜಕಿ ರೇಖಾ ಉಪಸ್ಥಿತರಿದ್ದರು.
ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಹಿಂದಿ ಭಾಷಣ ಹಾಗೂ ಗೀತಗಾಯನ ಸ್ಫರ್ಧೆ ಏರ್ಪಡಿಸಲಾಗಿತ್ತು. ಭಾಷನ ಸ್ಫರ್ಧೆಯಲ್ಲಿ ಸೀಮಾ ಪ್ರಥಮ ಹಾಗೂ ಸಿಂಚನ ದ್ವಿತೀಯ ಸ್ಥಾನ ಪಡೆದರೆ,ಗೀತಗಾಯನ ಸ್ಫರ್ಧೆಯಲ್ಲಿ ನಿಶಿತಾ ಪ್ರಥಮ ಹಾಗೂ ಸೀಮಾ ದ್ವಿತೀಯ ಸ್ಥಾನ ಪಡೆದರು.
ವಿದ್ಯಾರ್ಥಿನಿ ಕೃತಿಕಾ ಡಿಜೆ ಸ್ವಾಗತಿಸಿ ,ನಿಶ್ಚಿತಾ ಸಿಪಿ ವಂದಿಸಿದರು.ಸಿಂಚನ ಟಿಪಿ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.