News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2022-23ರ ಅವಧಿಯಲ್ಲಿ 1,547 ಕೋಟಿ ರೂ ಹೂಡಿಕೆ ಸ್ವೀಕರಿಸಿದ ಜಮ್ಮು-ಕಾಶ್ಮೀರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಜನವರಿವರೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ 1,547 ಕೋಟಿ ರೂಪಾಯಿಗಳ ದಾಖಲೆಯ ಹೂಡಿಕೆ ಹರಿದು ಬಂದಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಇಂದು ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಉತ್ಪಾದನೆ, ಸೇವೆಗಳು, ಆರೋಗ್ಯ ಮತ್ತು ಔಷಧಗಳು, ಕೃಷಿ ಆಧಾರಿತ ಉದ್ಯಮ ಮತ್ತು ಪ್ರವಾಸೋದ್ಯಮ, ಚಲನಚಿತ್ರ ಮತ್ತು ವೈದ್ಯಕೀಯ ಸೇರಿದಂತೆ ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ ಮುಂದಿನ ಐದು ವರ್ಷಗಳಲ್ಲಿ ಹೂಡಿಕೆಗಳು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

2022-23ರ ಅವಧಿಯಲ್ಲಿ ಜನವರಿವರೆಗೆ, ಕೇಂದ್ರಾಡಳಿತ ಪ್ರದೇಶವು 1,547.87 ಕೋಟಿ ರೂಪಾಯಿಗಳ ದಾಖಲೆಯ ಹೂಡಿಕೆಯನ್ನು ಸ್ವೀಕರಿಸಿದೆ ಮತ್ತು ಪ್ರಸಕ್ತ ಹಣಕಾಸು ವರ್ಷದ ಈ ಹೂಡಿಕೆಯು ಹಿಂದಿನ ಯಾವುದೇ ಹಣಕಾಸು ವರ್ಷಗಳಿಗೆ ಹೋಲಿಸಿದರೆ ಇದುವರೆಗಿನ ಅತಿ ಹೆಚ್ಚು ಎಂದು ಅವರು ಲಿಖಿತ ಪ್ರಶ್ನೆಗೆ ಉತ್ತರಿಸಿದರು.

ಜಮ್ಮು ಮತ್ತು ಕಾಶ್ಮೀರವು 2021-22ರಲ್ಲಿ 376.76 ಕೋಟಿ ರೂಪಾಯಿ, 2020-21 ರಲ್ಲಿ 412.74 ಕೋಟಿ ರೂಪಾಯಿ, 2019-20 ರಲ್ಲಿ 296.64 ಕೋಟಿ ರೂಪಾಯಿ, 2018-19 ರಲ್ಲಿ 590.97 ಕೋಟಿ ರೂಪಾಯಿ ಮತ್ತು 818-19 ರಲ್ಲಿ 840.51 ಕೋಟಿ ರೂಪಾಯಿ ಹೂಡಿಕೆಯನ್ನು ಪಡೆದಿದೆ ಎಂದು ಸಚಿವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಈಗಾಗಲೇ 64,058 ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಪ್ರಸ್ತಾವನೆಗಳನ್ನು ಸ್ವೀಕರಿಸಿದೆ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರವು ಫೆಬ್ರವರಿ 19, 2021 ರಂದು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಕೈಗಾರಿಕಾ ಅಭಿವೃದ್ಧಿಗಾಗಿ ಹೊಸ ಕೇಂದ್ರ ವಲಯದ ಯೋಜನೆಯನ್ನು ಪ್ರಕಟಿಸಿದೆ ಮತ್ತು ಅಧಿಕಾರಿಗಳು ವಿವಿಧ ನೀತಿ ಉಪಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ರಾಯ್ ಹೇಳಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top