ನವದೆಹಲಿ: ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯದ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ತ್ರಿಪುರಾ ಮತ್ತು ನಾಗಾಲ್ಯಾಂಡಿನಲ್ಲಿ ಬಿಜೆಪಿ ಮೈತ್ರಿಕೂಟ ಬಹುಮತ ಪಡೆದು ಸರ್ಕಾರ ರಚನೆ ಮಾಡುತ್ತಿದೆ. ಮೇಘಾಲಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಜೆಪಿ-ಐಪಿಎಫ್ಟಿ ಮೈತ್ರಿಕೂಟ ತ್ರಿಪುರಾದಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.ಇವುಗಳು 31 ಸ್ಥಾನಗಳಲ್ಲಿನ ಜಯ ಸಾಧಿಸಿದೆ. ಮತ್ತೊಂದು ಅವಧಿಗೆ ತ್ರಿಪುರಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ನಿರೀಕ್ಷೆಯಿರುವ ಮಾಣಿಕ್ ಸಹಾ ಅವರು ತ್ರಿಪುರಾದಲ್ಲಿ ಎರಡನೇ ಅವಧಿಗೆ ಬಿಜೆಪಿ ಯಶಸ್ಸಿಗೆ ಕಾರಣರಾಗಿದ್ದಾರೆ.
ನಾಗಾಲ್ಯಾಂಡ್ನಲ್ಲೂ ಬಿಜೆಪಿ-ಎನ್ಡಿಪಿಪಿ ಮೈತ್ರಿ ಬಹುಮತ ಪಡೆದುಕೊಂಡು ಸರ್ಕಾರ ರಚಿಸುವತ್ತ ಮುನ್ನಡೆದಿದೆ.
ಮೇಘಾಲಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕರೆ ಮಾಡಿ ರಾಜ್ಯ ಚುನಾವಣೆಯಲ್ಲಿ ತಮ್ಮ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) ಬಹುಮತದ ಕೊರತೆ ಹೊಂದಿರುವ ಕಾರಣ ಮತ್ತೊಂದು ಅವಧಿಗೆ ಸಹಾಯ ನೀಡುವಂತೆ ಕೋರಿದ್ದಾರೆ ಎಂದು ವರದಿಗಳು ತಿಳಿಸಿವೆ.
I thank the people of Nagaland for blessing the @NDPPofficial–@BJP4Nagaland alliance with yet another mandate to serve the state. The double engine government will keep working for the state's progress. I laud our party workers for their hardwork which ensured this result.
— Narendra Modi (@narendramodi) March 2, 2023
Thank you Tripura! This is a vote for progress and stability. @BJP4Tripura will continue to boost the state's growth trajectory. I am proud of all Tripura BJP Karyakartas for their spectacular efforts at the grassroots.
— Narendra Modi (@narendramodi) March 2, 2023
Grateful to all those who have supported @BJP4Meghalaya in the Assembly polls. We will keep working hard to enhance the development trajectory of Meghalaya and focus on empowering the people of the state. I am also thankful to our party workers for the effort they put.
— Narendra Modi (@narendramodi) March 2, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.