ನವದೆಹಲಿ: ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಸೋಮವಾರ ದೇಶದ ಏಳು ರಾಜ್ಯಗಳಲ್ಲಿ ಏಳು ಹೊಸ ಇಎಸ್ಐಸಿ ಆಸ್ಪತ್ರೆಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
ಈ ಆಸ್ಪತ್ರೆಗಳು ಒಟ್ಟಾರೆಯಾಗಿ 880 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿರುತ್ತವೆ ಮತ್ತು ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತವೆ.
ಇಎಸ್ಐ ಕಾರ್ಪೊರೇಷನ್ನ 190ನೇ ಸಭೆಯಲ್ಲಿ ಯಾದವ್ ಈ ಘೋಷಣೆ ಮಾಡಿದ್ದಾರೆ.
“ಇಎಸ್ಐ ಕಾರ್ಪೊರೇಶನ್ನ 190 ನೇ ಸಭೆಯು ಚಂಡೀಗಢದಲ್ಲಿ ನಿನ್ನೆ ಮುಕ್ತಾಯಗೊಂಡಿದೆ. ಭಾರತದ ಶ್ರಮ ಜೀವಿಗಳಿಗೆ ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ಕುರಿತು ಕೆಲವು ಪ್ರಮುಖ ನಿರ್ಧಾರಗಳೊಂದಿಗೆ ಸಭೆಯು ಕೊನೆಗೊಂಡಿತು” ಎಂದು ಯಾದವ್ ಟ್ವೀಟ್ ಮಾಡಿದ್ದಾರೆ.
ಬೆಳಗಾವಿ (ಕರ್ನಾಟಕ), ಶಂಶಾಬಾದ್ (ತೆಲಂಗಾಣ), ಬಾರಾಮತಿ (ಮಹಾರಾಷ್ಟ್ರ), ಕಿಶನ್ಗಡ್, ಅಜ್ಮೀರ್ (ರಾಜಸ್ಥಾನ), ಬಾಲಸೋರ್ (ಒಡಿಶಾ), ಕರ್ನೂಲ್ (ಆಂಧ್ರಪ್ರದೇಶ) ಮತ್ತು ಗ್ರೇಟರ್ ನೋಯ್ಡಾ (ಉತ್ತರ ಪ್ರದೇಶ)ದಲ್ಲಿ ಹೊಸ ಇಎಸ್ಐಸಿ ಆಸ್ಪತ್ರೆಗಳನ್ನು ಸ್ಥಾಪಿಸಲು ಸಭೆ ನಿರ್ಧರಿಸಿದೆ” ಎಂದಿದ್ದಾರೆ.
ಕಾರ್ಮಿಕ ಸಚಿವಾಲಯದ ಬಿಡುಗಡೆಯ ಪ್ರಕಾರ, ಕಾರ್ಮಿಕರ ಸಂಖ್ಯೆಯಲ್ಲಿನ ಹೆಚ್ಚಳವನ್ನು ಪರಿಗಣಿಸಿ, ಇಎಸ್ಐ ಕಾರ್ಪೊರೇಶನ್ ಸಭೆಯಲ್ಲಿ ಏಳು ಹೊಸ ಆಸ್ಪತ್ರೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.