ಬೆಂಗಳೂರು: ಭಾರತದ ಚಂದ್ರಯಾನ ಕಾರ್ಯಾಚರಣೆಗೆ ಮಹತ್ವದ ಉತ್ತೇಜನ ದೊರೆತಿದೆ. ಚಂದ್ರಯಾನ-3ಗಾಗಿ ನಡೆಸಿದ EMI-EMC (ಎಲೆಕ್ಟ್ರೋ-ಮ್ಯಾಗ್ನೆಟಿಕ್ ಇಂಟರ್ಫರೆನ್ಸ್/ ಎಲೆಕ್ಟ್ರೋ-ಮ್ಯಾಗ್ನೆಟಿಕ್ ಕಾಂಪಾಟಿಬಿಲಿಟಿ) ಪರೀಕ್ಷೆಯು ಯಶಸ್ವಿಯಾಗಿದೆ.
ಬಾಹ್ಯಾಕಾಶ ಪರಿಸರದಲ್ಲಿ ಉಪಗ್ರಹ ಉಪವ್ಯವಸ್ಥೆಗಳ ಕ್ರಿಯಾತ್ಮಕತೆಯನ್ನು ಮತ್ತು ನಿರೀಕ್ಷಿತ ವಿದ್ಯುತ್ಕಾಂತೀಯ ಮಟ್ಟಗಳೊಂದಿಗೆ ಅವುಗಳ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳಲು ಉಪಗ್ರಹ ಕಾರ್ಯಾಚರಣೆಗಳಿಗಾಗಿ EMI-EMC ಪರೀಕ್ಷೆಯನ್ನು ನಡೆಸಲಾಗುತ್ತದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಹೇಳಿಕೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಬೆಂಗಳೂರಿನ ಯು ಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ಜನವರಿ 31 ರಿಂದ ಫೆಬ್ರವರಿ 2 ರ ನಡುವೆ ಪರೀಕ್ಷೆ ನಡೆಸಲಾಗಿದೆ ಎಂದಿದೆ. ಉಪಗ್ರಹಗಳ ರಿಯಲೈಝೇಶನ್ನಲ್ಲಿ ಇದು ಪ್ರಮುಖ ಮೈಲಿಗಲ್ಲು ಎಂದು ವಿಶ್ಲೇಷಿಸಿದೆ.
ಚಂದ್ರಯಾನ-3 ಅಂತರಗ್ರಹ ಮಿಷನ್ ಮೂರು ಪ್ರಮುಖ ಮಾಡ್ಯೂಲ್ಗಳನ್ನು ಹೊಂದಿದೆ. ಅದೆಂದರೆ ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮಾಡ್ಯೂಲ್ ಮತ್ತು ರೋವರ್. ಕಾರ್ಯಾಚರಣೆಯ ಸಂಕೀರ್ಣತೆಯು ಮಾಡ್ಯೂಲ್ಗಳ ನಡುವೆ ರೇಡಿಯೋ-ಫ್ರೀಕ್ವೆನ್ಸಿ (RF) ಸಂವಹನ ಲಿಂಕ್ಗಳನ್ನು ಸ್ಥಾಪಿಸಲು ಪೂರಕವಾಗಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.