ಮುಂಬಯಿ: ಮಹಾರಾಷ್ಟ್ರದಲ್ಲಿ ರಾಜಕೀಯ ಪರಿಸ್ಥಿತಿಗಳು ಕುತೂಹಲ ಕೆರಳಿಸುತ್ತಿದೆ. ಒಂದು ಕಡೆ ತಮ್ಮ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಕಳೆದುಕೊಂಡು ಕಂಗೆಟ್ಟಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬಿಜೆಪಿಯ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಇನ್ನೊಂದು ಕಡೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಣ ಶಿವಸೇನೆಯ ಚಿಹ್ನೆ ಮತ್ತು ಹೆಸರು ತಮಗೆ ಸಿಕ್ಕಿರುವ ಬಗ್ಗೆ ಸಂಭ್ರಮಾಚರಣೆಯಲ್ಲಿ ತೊಡಗಿದೆ.
ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸಿರುವ ಚುನಾವಣಾ ಆಯೋಗದ ನಿರ್ಧಾರದಿಂದ ಉದ್ಧವ್ ಠಾಕ್ರೆ ಪಾಳಯ ತತ್ತರಿಸಿದ್ದು, ಇಂಟರ್ನೆಟ್ ಯುದ್ಧದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನು ಹಿಂದಿಕ್ಕುವ ಪ್ರಯತ್ನ ಮಾಡಿದೆ. shivsena.in ಎಂಬ ಡೊಮೇನ್ ಹೆಸರಿನೊಂದಿಗೆ ಇದ್ದ ಶಿವಸೇನೆಯ ವೆಬ್ಸೈಟ್ ಅನ್ನು ಅಳಿಸಿ ಹಾಕಿದೆ ಮತ್ತು ಅದರ ಟ್ವಿಟರ್ ಪ್ರೊಫೈಲ್ ಹೆಸರನ್ನು ಶಿವಸೇನಾ – ಉದ್ಧವ್ ಬಾಳಾಸಾಹೇಬ್ ಠಾಕ್ರೆ ಎಂದು ಬದಲಾಯಿಸಲಾಗಿದೆ. ಟ್ವಿಟರ್ ಹ್ಯಾಂಡಲ್ ಅನ್ನು ಬದಲಾಯಿಸಿರುವುದರಿಂದ, ಖಾತೆಯು ‘ಬ್ಲೂ ಟಿಕ್’ ಅನ್ನು ಕಳೆದುಕೊಂಡಿದೆ.
ಇನ್ನೊಂದು ಕಡೆ ಬಿಜೆಪಿ ವಿರುದ್ಧ ಕಿಡಿಕಾರುತ್ತಿರುವ ಉದ್ಧವ್ ಠಾಕ್ರೆ, ನಾನು ಹಿಂದೂ ಮತ್ತು ಹಿಂದುತ್ವದ ನಾಯಕ ಎಂದು ಹೇಳಿಕೊಂಡಿದ್ದಾರೆ. ನಾವು ಬಿಜೆಪಿಯನ್ನು ತೊರೆದಿದ್ದೇವೆಯೇ ಹೊರತು ಹಿಂದುತ್ವವನ್ನಲ್ಲ. ನನ್ನ ತಂದೆ ನನಗೆ ನೀಡಿದ ಹಿಂದೂ ಧರ್ಮವನ್ನು ನಾನು ತ್ಯಜಿಸಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೇ ಬಿಲ್ಲು ಮತ್ತು ಬಾಣದ ಚಿಹ್ನೆ ನಮ್ಮ ಕೈಯಿಂದ ಹೋಗಿರಬಹುದು ಆದರೆ ಶ್ರೀರಾಮ ನಮ್ಮೊಂದಿಗೆ ಸದಾ ಇದ್ದಾನೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.