ವಾಷಿಂಗ್ಟನ್: ಅರುಣಾಚಲ ಪ್ರದೇಶವನ್ನು ಭಾರತದ ಅವಿಭಾಜ್ಯ ಅಂಗವೆಂದು ಪರಿಗಣಿಸುವ ಅಪರೂಪದ ನಿರ್ಣಯವನ್ನು ಯುಎಸ್ ಸೆನೆಟ್ನಲ್ಲಿ ಮೂವರು ಸೆನೆಟರ್ಗಳ ನೇತೃತ್ವದಲ್ಲಿ ಪರಿಚಯಿಸಲಾಗಿದೆ.
ಈ ನಿರ್ಣಯ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕತೆಯನ್ನು ಬೆಂಬಲಿಸುತ್ತದೆ, ಅಲ್ಲದೇ ಈ ಭಾಗದಲ್ಲಿ ಮಿಲಿಟರಿ ಬಲ ಪ್ರದರ್ಶಿಸುವ ಮೂಲಕ ಬೆದರಿಕೆಯೊಡ್ಡುತ್ತಿರುವ ಚೀನಾ ನಿಲುವನ್ನು ನಿರ್ಣಯವು ಖಂಡಿಸಿದೆ.
ನಿರ್ಣಯವನ್ನು ಸೆನೆಟರ್ಗಳಾದ ಜೆಫ್ ಮಾರ್ಕ್ಲಿ ಮತ್ತು ಬಿಲ್ ಹ್ಯಾಗರ್ಟಿ ಪರಿಚಯಿಸಿದರು ಮತ್ತು ಜಾನ್ ಕಾರ್ನಿನ್ ಬೆಂಬಲಿಸಿದರು. ಭಾರತದ ರಕ್ಷಣಾ ಆಧುನೀಕರಣ ಮತ್ತು ವೈವಿಧ್ಯೀಕರಣವನ್ನು ಸಹ ನಿರ್ಣಯದಲ್ಲಿ ಬೆಂಬಲಿಸಲಾಗಿದೆ. ಅಲ್ಲದೇ ಗಡಿ ಮೂಲಸೌಕರ್ಯವನ್ನು ಸುಧಾರಿಸುವುದು ಸೇರಿದಂತೆ ಅರುಣಾಚಲದಲ್ಲಿ ಭಾರತದ ಅಭಿವೃದ್ಧಿಯ ಪ್ರಯತ್ನಗಳನ್ನು ಇದು ಶ್ಲಾಘಿಸಿದೆ. ಈ ಪ್ರದೇಶದಲ್ಲಿ ಅಮೆರಿಕಾವು ಭಾರತಕ್ಕೆ ಸಹಾಯವನ್ನು ಆಳಗೊಳಿಸಲು ಬದ್ಧವಾಗಿದೆ, ಇದು ಸಮಾನ ಮನಸ್ಕ ಪಾಲುದಾರರನ್ನು ಪ್ರೋತ್ಸಾಹಿಸುತ್ತದೆ ಎಂದು ತಿಳಿಸಲಾಗಿದೆ.
ಕಳೆದ ಹಲವು ವರ್ಷಗಳಿಂದ ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ ಪೂರ್ವ ವಲಯದಲ್ಲಿ ಭಾರತ ಮತ್ತು ಚೀನಾ ನಡುವಿನ ಘರ್ಷಣೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವದ್ದಾಗಿದೆ.
“ಭಾರತೀಯ ರಾಜ್ಯವಾದ ಅರುಣಾಚಲ ಪ್ರದೇಶವನ್ನು ಭಾರತ ಗಣರಾಜ್ಯದ ಭಾಗವೆಂದು ಮತ್ತು ಇದು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭಾಗವಲ್ಲ ಈ ನಿರ್ಣಯವು ಸ್ಪಷ್ಟಪಡಿಸುತ್ತದೆ. ಈ ಪ್ರದೇಶಕ್ಕೆ ಬೆಂಬಲ ಮತ್ತು ಸಹಾಯವನ್ನು ಗಾಢವಾಗಿಸಲು ಅಮೆರಕಾ ಬದ್ಧವಾಗಿದೆ” ಎಂದು ನಿರ್ಣಯ ಮಂಡಿಸಿದ ಸೆನೆಟರ್ ಜೆಫ್ ಮಾರ್ಕ್ಲಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.