ನವದೆಹಲಿ: ತ್ರಿಪುರಾದಲ್ಲಿ ಇಂದು ವಿಧಾನಸಭೆ ಚುನಾವಣೆಗೆ ಮತದಾನ ಆರಂಭಗೊಂಡಿದೆ. ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 4 ಗಂಟೆಗೆ ಮುಕ್ತಾಯವಾಗಲಿದೆ.
28 ಲಕ್ಷಕ್ಕೂ ಅಧಿಕ ಮತದಾರರು 22 ಮಹಿಳೆಯರು ಸೇರಿದಂತೆ 259 ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಬಿಜೆಪಿ, ಕಾಂಗ್ರೆಸ್, ಎಡರಂಗ, ತಿಪ್ರಾ ಮೋಥಾ ಮತ್ತು ಟಿಎಂಸಿ ಇತರ ಪಕ್ಷಗಳು ಕಣದಲ್ಲಿವೆ.
ರಾಜ್ಯದಲ್ಲಿ ಒಟ್ಟು 3,336 ಮತಗಟ್ಟೆಗಳಿವೆ. ಚುನಾವಣಾ ಆಯೋಗವು ಮಾದರಿ ಮತಗಟ್ಟೆಗಳ ಜೊತೆಗೆ ಸಂಪೂರ್ಣ ಮಹಿಳೆಯರು, ಸಂಪೂರ್ಣ ಯುವಕರು ಮತ್ತು ಸಂಪೂರ್ಣ ದಿವ್ಯಾಂಗ ಮತಗಟ್ಟೆಗಳನ್ನು ಸ್ಥಾಪಿಸಿದೆ. ಶಾಂತಿಯುತ ಮತದಾನಕ್ಕಾಗಿ ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಹಿರಿಯ ಬಿಜೆಪಿ ನಾಯಕ ಮತ್ತು ಹಾಲಿ ಮುಖ್ಯಮಂತ್ರಿ ಡಾ. ಮಾಣಿಕ್ ಸಹಾ, ಕೇಂದ್ರ ಸಚಿವೆ ಪ್ರತಿಮಾ ಭೌಮಿಕ್, ರಾಜ್ಯ ಪಕ್ಷದ ಅಧ್ಯಕ್ಷ ರಾಜೀಬ್ ಭಟ್ಟಾಚಾರ್ಯ, ಉಪ ಮುಖ್ಯಮಂತ್ರಿ ಜಿಷ್ಣು ದೆಬ್ಬರ್ಮನ್, ಹಿರಿಯ ಸಿಪಿಐ-ಎಂ ನಾಯಕ ಜಿತೇಂದ್ರ ಚೌಧರಿ ಮತ್ತು ಪಬಿತ್ರಾ ಕರ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಿರ್ಜಿತ್ ಸಿನ್ಹಾ ಮತ್ತು ಮಾಜಿ ಸಚಿವ ಸುದೀಪ್ ರಾಯ್ ಬರ್ಮನ್ ಸ್ಪರ್ಧೆಯಲ್ಲಿರುವವರಲ್ಲಿ ಪ್ರಮುಖರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.