News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆರ್ಥಿಕ ಬಿಕ್ಕಟ್ಟಿಗೆ ಕಂಗೆಟ್ಟ ಪಾಕಿಸ್ಥಾನ: ಹಾಲಿನ ಬೆಲೆ ಲೀಟರ್‌ಗೆ 210 ರೂ

ಇಸ್ಲಾಮಾಬಾದ್: ತೀವ್ರ ಸ್ವರೂಪದ ಆರ್ಥಿಕ ಬಿಕ್ಕಟ್ಟಿಗೆ ಪಾಕಿಸ್ಥಾನ ಕಂಗೆಟ್ಟು ಹೋಗಿದೆ. ಅಗತ್ಯ ವಸ್ತುಗಳ ಬೆಲೆ ಗಗನ ಮುಖಿಯಾಗಿದ್ದು ಜನರು ಪರದಾಡುತ್ತಿದ್ದಾರೆ. ಅಲ್ಲಿ ಲೂಸ್ ಹಾಲಿನ ಬೆಲೆ ಪ್ರತಿ ಲೀಟರ್‌ಗೆ  210 ರೂಪಾಯಿಗಳಿಗೆ ಏರಿದೆ ಮತ್ತು ಕೋಳಿ ಮಾಂಸ ಕೆಜಿಗೆ 780 ರೂಪಾಯಿಗಳಿಗೆ ಏರಿದೆ.

ಈ ನಡುವೆ ಅತಿ ಪ್ರಮುಖ ಬೇಲ್ಔಟ್ ಪಡೆಯುವ ಪ್ರಯತ್ನದಲ್ಲಿ ಪಾಕಿಸ್ತಾನವು ಈ ತಿಂಗಳು ಒಟ್ಟು 170 ಶತಕೋಟಿ ರೂಪಾಯಿಗಳ ಹೊಸ ತೆರಿಗೆಗಳನ್ನು ವಿಧಿಸಲಿದೆ. ಆದರೆ, ಹೆಚ್ಚುವರಿ ತೆರಿಗೆಗಳು ರಾಷ್ಟ್ರದ ಹಣದುಬ್ಬರವನ್ನು ವೇಗಗೊಳಿಸಬಹುದು ಎಂದು ವಿಶ್ಲೇಷಕರು ಕಳವಳ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮೊದಲು, ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾದ ಕಾರಣ ನಗದು ಕೊರತೆಯಿರುವ ಪಾಕಿಸ್ತಾನಕ್ಕೆ 6 ಬಿಲಿಯನ್ ಡಾಲರ್ ಬೇಲ್‌ಔಟ್ ಅನ್ನು ವಿಳಂಬಗೊಳಿಸಿದೆ.

ಕರಾಚಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಆಹಾರದ ಬೆಲೆಗಳು ನಿರಂತರವಾಗಿ ಏರುತ್ತಿವೆ. ಮಾಂಸ, ಹಾಲು, ತರಕಾರಿ ಖರೀದಿಸಲಾಗದೆ ಜನ ತೊಂದರೆಗೀಡಾಗುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top