News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಫೆಬ್ರವರಿ 18 ಮತ್ತು 19 ರಂದು ಮಂಗಳೂರು ಲಿಟ್‌ಫೆಸ್ಟ್‌ನ 5ನೇ ಆವೃತ್ತಿ

ಮಂಗಳೂರು: ಫೆಬ್ರವರಿ 18-19 ರಂದು ಎರಡು ದಿನಗಳ ಕಾಲ ಮಂಗಳೂರಿನ ಟಿಎಂಎ ಪೈ ಇಂಟರ್‌ನ್ಯಾಷನಲ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ  ಮಂಗಳೂರು ಲಿಟ್‌ ಫೆಸ್ಟ್‌ನ ಐದನೇ ಆವೃತ್ತಿಯು ʼThe Idea of Bharath’ ಎಂಬ ಥೀಮ್‌ನಡಿಯಲ್ಲಿ ಜರುಗಲಿದೆ.

ಒಟ್ಟು 25  ಸೆಷನ್‌ಗಳ ವಿಚಾರ ಸಂಕಿರಣ  ಆಯೋಜಿಸಲಾಗಿದ್ದು, ಇದರಲ್ಲಿ 55 ಕ್ಕೂ ಅಧಿಕ ವಾಗ್ಮಿಗಳು ಭಾಗವಹಿಸಲಿದ್ದಾರೆ. ಪ್ರತಿ ಸೆಷನ್‌ನ ಕೊನೆಗೆ ಸಾಹಿತ್ಯಕ್ಕೆ ಸಂಬಂಧಿಸಿದ ರಸಪ್ರಶ್ನೆ ಇರಲಿದ್ದು, ಗೆದ್ದವರಿಗೆ ಪುಸ್ತಕವನ್ನು ಬಹುಮಾನವಾಗಿ ನೀಡಲಾಗುತ್ತದೆ.

ಲಿಟ್‌ ಫೆಸ್ಟ್‌ನಲ್ಲಿ 2 ಸಿನಿಮಾಗಳ ಪ್ರದರ್ಶನ ಜರುಗಲಿದೆ. ಅಲ್ಲದೇ 16 ಪುಸ್ತಕ ಮಳಿಗೆಗಳು ಕೂಡ ಇರಲಿವೆ. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷರಾದ ಶ್ರೀ ತುಕಾರಾಮ್ ಪೂಜಾರಿ ಇವರಿಗೆ ಈ ಬಾರಿಯ ಪ್ರಶಸ್ತಿ ಪ್ರದಾನಿಸಲಾಗುತ್ತಿದೆ.  ಪುಸ್ತಕ ಮಳಿಗೆ, ತುಳು ಅಕ್ಷರ ಕಲಿಕಾ ಕಾರ್ಯಾಗಾರ, ಮಕ್ಕಳ ಸಾಹಿತ್ಯ ಅಭಿರುಚಿ ಮತ್ತು ಕಥೆಯ ಬಗ್ಗೆ ಪಾಲಕರಿಗೆ ಆಸಕ್ತಿ ಬೆಳೆಸುವ ದೃಷ್ಟಿಯಿಂದ ಅವಧಿ, ಲೇಖಕರೊಂದಿಗೆ ಸಂವಾದ – (ಹರಟೆ ಕಟ್ಟೆ) ಈ ಬಾರಿಯ ಲಿಟ್ ಫೆಸ್ಟ್‌ನ ವಿಶೇಷತೆಯಾಗಿದೆ.

ಉದ್ಘಾಟನಾ ಅವಧಿ ʼThe Idea of Bharath In Amrithkal: Reclaiming The Right Path-The Way Forward ಪರಿಕಲ್ಪನೆಯ ಅಡಿ ಜರುಗಲಿದ್ದು, ಆರ್‌. ಜಗ್ನನಾಥ್‌, ವಿನಯ್‌ ಹೆಗ್ಡೆ, ವಿ. ನಾಗರಾಜ್‌ ಅವರು ಭಾಗಿಯಾಗಲಿದ್ದಾರೆ.

ರಿಷಭ್‌ ಶೆಟ್ಟಿ, ಪ್ರಕಾಶ್‌ ಬೆಳವಾಡಿ, ಸ್ಮಿತಾ ಪ್ರಕಾಶ್, ಶಿವ್‌ ಅರೂರ್‌, ಅಜಿತ್‌ ಹನಮಕ್ಕನವರ್‌, ಅಡ್ಡಂಡ ಕಾರ್ಯಪ್ಪ, ಬಸುಮ ಕೊಡಗು, ದಕ್ಕುಲ ಮುನಿಸ್ವಾಮಿ ಸೇರಿದಂತೆ ಅನೇಕ ವಾಗ್ಮಿಗಳು, ಸಾಹಿತಿಗಳು, ಸಂಶೋಧಕರು, ವಿಷಯ ಪರಿಣಿತರು ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಇರಲಿದ್ದಾರೆ.

ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳ ವಿವರಗಳನ್ನು ಈ ಲಿಂಕ್‌ನಲ್ಲಿ ನೋಡಬಹುದು – https://mlrlitfest.org/event-schedule-2023/

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top