ನವದೆಹಲಿ: ಭಾರತಕ್ಕೆ ಹೊರ ದೇಶದಿಂದ ಆಗಮಿಸುವ ಪ್ರವಾಸಿಗರಿಗೆ ಭಾರತೀಯ ರೈಲ್ವೆ ಯಾವಾಗಲೂ ಆಕರ್ಷಣೆಯ ಕೇಂದ್ರವಾಗಿರುತ್ತದೆ. ಈ ಪ್ರಯಾಣವನ್ನು ಪ್ರಯಾಣಿಕರಿಗೆ ಸುಲಭ ಮತ್ತು ಆರಾಮದಾಯಕವಾಗಿಸಲು ರೈಲ್ವೆ ಅನೇಕ ಪ್ರಯತ್ನಗಳನ್ನು ಕೂಡ ಮಾಡುತ್ತಿದೆ. ಅದರಲ್ಲಿ ರೈಲುಗಳಲ್ಲಿ ಉತ್ತಮ ಆಹಾರವನ್ನು ನೀಡುವುದು ಕೂಡ ಒಂದು. ಆದರೆ, ರೈಲುಗಳಲ್ಲಿನ ಆಹಾರದ ಗುಣಮಟ್ಟ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಟೀಕೆಗಳಿಗೆ ಗುರಿಯಾಗಿರುತ್ತದೆ. ಆದರೆ ಅಮೇರಿಕನ್ ಸಮಾಜಶಾಸ್ತ್ರಜ್ಞ ಸಾಲ್ವಟೋರ್ ಬಾಬೋನ್ಸ್ ಅವರು ಭಾರತೀಯ ರೈಲಿನಲ್ಲಿ ಪ್ರಯಾಣಿಸಿ ಅದರಲ್ಲಿನ ಆಹಾರವನ್ನು ಕೊಂಡಾಡಿದ್ದಾರೆ.
ಸಾಲ್ವಟೋರ್ ಅವರು ಭಾರತೀಯ ರೈಲ್ವೆಯ ಆಹಾರವನ್ನು ಪ್ರಶಂಸಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ್ದಾರೆ. ರೈಲಿನಲ್ಲಿ ಊಟ ಬಡಿಸುವ ವ್ಯಕ್ತಿಯನ್ನು ಅಂತರಾಷ್ಟ್ರೀಯ ಬ್ರ್ಯಾಂಡ್ ಅಂಬಾಸಿಡರ್ ಮಾಡುವಂತೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.
ಸಾಲ್ವಟೋರ್ ಅವರು ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಿ ಅದರ ಆಹಾರವನ್ನು ಫಸ್ಟ್ ಕ್ಲಾಸ್ ಆಗಿದೆ ಎಂದು ಬಣ್ಣಿಸಿದ್ದಾರೆ.
ರೈಲಿನಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡ ಸಾಲ್ವಟೋರ್ ಅವರು, “ಇದು ಭಾರತದ ರೈಲ್ವೆಯಲ್ಲಿ ದ್ವಿತೀಯ ದರ್ಜೆಯ ಆಹಾರವೇ? ಇದು ನನಗೆ ಮೊದಲ ದರ್ಜೆಯ ರುಚಿ ಎನಿಸುತ್ತಿದೆ! ಸಚಿವ ಅಶ್ವಿನಿ ವೈಷ್ಣವ್ ಅವರೇ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ನೀವು ನರೇಂದ್ರ ಕುಮಾರ್ ಅವರನ್ನು ನಿಮ್ಮ ಅಂತರರಾಷ್ಟ್ರೀಯ ಬ್ರಾಂಡ್ ಅಂಬಾಸಿಡರ್ ಆಗಿ ಮಾಡಿಕೊಳ್ಳಬೇಕು. ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಅಡುಗೆಮನೆಗೆ 5 ಸ್ಟಾರ್ಸ್” ಎಂದಿದ್ದಾರೆ. ಅಲ್ಲದೇ ಉಚಿತ ಐಸ್ ಕ್ರೀಂ ಕೂಡ ಪಡೆದಿದ್ದೇನೆ ಎಂದಿದ್ದಾರೆ.
This is 2nd Class food on India's national railways? It tastes First Class to me! I'm very impressed, Minister @AshwiniVaishnaw. You should make Mr. Narendra Kumar your international brand ambassador. Five stars for the kitchen in the Rajdhani Express. — UPDATE: free ice cream! pic.twitter.com/9TwbnjXG7c
— Salvatore Babones (@ProfBabones) February 13, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.