News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಿಜೆಪಿಗೆ ಮುಚ್ಚಿಡಲು, ಭಯಪಡಲು ಕಾರಣವಿಲ್ಲ: ಹಿಂಡನ್‌ಬರ್ಗ್‌ ವರದಿ ಬಗ್ಗೆ ಅಮಿತ್‌ ಶಾ

ನವದೆಹಲಿ: ಅದಾನಿ ಗ್ರೂಪ್‌ ಆಫ್‌ ಕಂಪನಿಗಳ ಬಗೆಗಿನ ಹಿಂಡನ್‌ಬರ್ಗ್‌ ವರದಿಯ ಕುರಿತು ಪ್ರತಿಪಕ್ಷಗಳು ನರೇಂದ್ರ ಮೋದಿ ನೇತೃತ್ವದ ಸರಕಾರವನ್ನುಗುರಿಯಾಗಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು, ಬಿಜೆಪಿಗೆ ಮರೆಮಾಚಲು ಅಥವಾ ಭಯಪಡಲು ಏನೂ ಇಲ್ಲಎಂದಿದ್ದಾರೆ.

ಮಂಗಳವಾರ ಎಎನ್‌ಐಗೆ ಸಂದರ್ಶನ ನೀಡಿದ ಅವರು, ಸುಪ್ರೀಂಕೋರ್ಟ್ ಈ ವಿಷಯದ ಬಗ್ಗೆ ಗಮನ ಹರಿಸಿರುವುದರಿಂದ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ ಎಂದಿದ್ದಾರೆ

”ಸುಪ್ರೀಂಕೋರ್ಟ್ ಈ ವಿಚಾರವನ್ನು ಗಮನಕ್ಕೆ ತಂದಿದೆ. ಸಚಿವನಾಗಿ ಸುಪ್ರೀಂಕೋರ್ಟ್‌ ಕೈಗೆತ್ತಿಕೊಂಡ ವಿಷಯದ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ, ಆದರೆ ಇದರಲ್ಲಿ ಬಿಜೆಪಿಯವರು ಮುಚ್ಚಿಡಲು ಏನೂ ಇಲ್ಲ, ಭಯಪಡಬೇಕಾಗಿಲ್ಲ” ಎಂದಿದ್ದಾರೆ.

ಹಿಂಡೆನ್‌ಬರ್ಗ್ ವರದಿಯು ಅದಾನಿ ಸಮೂಹದ ಕಂಪನಿಗಳು ಷೇರುಗಳಲ್ಲಿ ಹಣಕಾಸಿನ ಅಕ್ರಮಗಳು ಮತ್ತು ಸ್ಟಾಕ್ ಮ್ಯಾನಿಪ್ಯುಲೇಷನ್ ಅನ್ನು ಮಾಡಿವೆ ಎಂದು ಆರೋಪಿಸಿದೆ. ಪ್ರತಿಪಕ್ಷಗಳು ಈ ಬಗ್ಗೆ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒತ್ತಾಯಿಸಿ ಸಂಸತ್ತಿನಲ್ಲಿ ದೊಡ್ಡ ರಂಪಾಟವನ್ನೇ ಮಾಡಿದ್ದವು.

ಆದರೆ, ಅದಾನಿ ಗ್ರೂಪ್ ಈ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿಹಾಕಿದೆ.

ಬಿಜೆಪಿಯು ದೇಶದ ಎಲ್ಲಾ ತನಿಖಾ ಸಂಸ್ಥೆಗಳನ್ನು ವಶಪಡಿಸಿಕೊಂಡಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಬಗ್ಗೆ ಪ್ರತಿಕ್ರಿಯಿಸಿದ ಅಮಿತ್‌ ಶಾ, ಆ ಪಕ್ಷಗಳು ನ್ಯಾಯಾಲಯಕ್ಕೆ ಹೋಗಬೇಕು ಎಂದು ಹೇಳಿದ್ದಾರೆ.

“ನ್ಯಾಯಾಲಯಗಳು ನಮ್ಮ ಅಧೀನದಲ್ಲಿ ಇಲ್ಲ” ಎಂದು ಅವರು ಹೇಳಿದ್ದಾರೆ.

“ಅವರು ಏಕೆ ನ್ಯಾಯಾಲಯಕ್ಕೆ ಹೋಗುವುದಿಲ್ಲ? ಪೆಗಾಸಸ್ ವಿಷಯ ಪ್ರಸ್ತಾಪಿಸಿದ ಸಮಯದಲ್ಲೂ ನಾನು ಅವರನ್ನು ಪುರಾವೆ ಸಮೇತ ನ್ಯಾಯಾಲಯಕ್ಕೆ ಹೋಗುವಂತೆ ಕೇಳಿದ್ದೆ. ಅವರಿಗೆ ಗದ್ದಲ ಮಾಡುವುದು ಮಾತ್ರ ಗೊತ್ತು. ನ್ಯಾಯಾಲಯದ ಮೊರೆ ಹೋದವರಿಗೆ ನ್ಯಾಯಾಲಯವು ಪೆಗಾಸಸ್‌ನ ಅರಿವನ್ನು ನೀಡಿತು ಮತ್ತು ಅದರ ತೀರ್ಪನ್ನು ಸಹ ನೀಡಿತು. ತನಿಖೆಯನ್ನು ಸಹ ಮಾಡಲಾಯಿತು” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top