News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪುಲ್ವಾಮ ದಾಳಿಯ ಕರಾಳ ನೆನಪಿಗೆ 4 ವರ್ಷ: ಹುತಾತ್ಮರಿಗೆ ನಮನ

ನವದೆಹಲಿ: ಪುಲ್ವಾಮಾ ಭಯೋತ್ಪಾದಕ ದಾಳಿಯ ಕರಾಳ ದಿನವನ್ನು ರಾಷ್ಟ್ರ ಇಂದು ನೆನಪಿಸಿಕೊಳ್ಳತ್ತಿದೆ, ವೀರ ಮರಣವನ್ನಪ್ಪಿದ ಯೋಧರಿಗೆ ನಮನ ಸಲ್ಲಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಪುಲ್ವಾಮಾ ದಾಳಿ ನಡೆದ ದಿನದ ಹಿನ್ನೆಲೆಯಲ್ಲಿ ಹುತಾತ್ಮರಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು ಮತ್ತು ಅವರ ಸರ್ವೋಚ್ಚ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲಎಂದು ಹೇಳಿದ್ದಾರೆ.

ಟ್ವಿಟ್‌ ಮಾಡಿರುವ ಮೋದಿ, “ಈ ದಿನ ನಾವು ಪುಲ್ವಾಮಾದಲ್ಲಿ ಕಳೆದುಕೊಂಡ ನಮ್ಮ ವೀರ ವೀರರನ್ನು ಸ್ಮರಿಸುತ್ತಿದ್ದೇವೆ. ಅವರ ಅತ್ಯುನ್ನತ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ. ಅವರ ಧೈರ್ಯವು ನಮ್ಮನ್ನು ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಪ್ರೇರೇಪಿಸುತ್ತದೆ” ಎಂದು ಹೇಳಿದ್ದಾರೆ.

ಫೆಬ್ರವರಿ 14, 2019ರಂದು ಭಯೋತ್ಪಾದಕರು ಪುಲ್ವಾಮದಲ್ಲಿ ನಡೆಸಿದ ಸ್ಪೋಟದಲ್ಲಿ 40 CRPF ಯೋಧರು ಹುತಾತ್ಮರಾದರು.

ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (JeM)ಗೆ ಸೇರಿದ ಪುಲ್ವಾಮಾದ ಸ್ಥಳೀಯ ನಿವಾಸಿ ಆದಿಲ್ ಅಹ್ಮದ್ ದಾರ್ ಎಂಬ ವ್ಯಕ್ತಿ ಈ ದಾಳಿಯನ್ನು ನಡೆಸಿದ್ದ, ಅವನು ತನ್ನ ವಾಹನವನ್ನು CRPF ಬೆಂಗಾವಲು ಪಡೆಗೆ ಢಿಕ್ಕಿ ಹೊಡೆಸಿ ಸ್ಪೋಟ ಸಂಭವಿಸುವಂತೆ ಮಾಡಿದ್ದ.

ಪುಲ್ವಾಮ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದ್ದ ಭಾರತೀಯ ವಾಯುಪಡೆಯು ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡಿತ್ತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top