News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಫಿಂಗರ್‌ಪ್ರಿಂಟ್‌ ನೀಡಲು ಸಾಧ್ಯವಾಗದವರಿಗೆ ಆಧಾರ್‌ ನೋಂದಣಿಯಲ್ಲಿ ವಿನಾಯಿತಿಗಳಿವೆ: ಕೇಂದ್ರ

ನವದೆಹಲಿ: ಫಿಂಗರ್‌ಪ್ರಿಂಟ್‌ನಂತಹ ಬಯೋಮೆಟ್ರಿಕ್ ಮಾಹಿತಿಯನ್ನು ಒದಗಿಸಲು ಸಾಧ್ಯವಾಗದೆ ಹೆಚ್ಚಿನ ಸಂಖ್ಯೆಯ ನಾಗರಿಕರು ಆಧಾರ್ ನೋಂದಣಿಯಿಂದ ಹೊರಗುಳಿದಿದ್ದಾರೆ ಎಂಬ ಆರೋಪವನ್ನು ಕೇಂದ್ರ ಸರ್ಕಾರ ಇಂದು ನಿರಾಕರಿಸಿದೆ.

ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಈ ಬಗ್ಗೆ ಮಾತನಾಡಿದ್ದು, ಆಧಾರ್ ನೋಂದಣಿಗಾಗಿ ಬೆರಳಚ್ಚು ನೀಡಲು ಸಾಧ್ಯವಾಗದ ನಿವಾಸಿಗಳ Iris ಸ್ಕ್ಯಾನ್‌ (ಕಣ್ಣಿನ ಸ್ಕ್ಯಾನ್) ಗಳನ್ನು ಸಂಗ್ರಹಿಸಬಹುದು ಎಂದು ಹೇಳಿದ್ದಾರೆ.

ನಿಯಮಾವಳಿಗಳ ಮೂಲಕ ಪರಿಗಣಿಸಲಾದ ಯಾವುದೇ ಬಯೋಮೆಟ್ರಿಕ್ ಮಾಹಿತಿಯನ್ನು ಒದಗಿಸಲು ಸಾಧ್ಯವಾಗದ ನಿವಾಸಿಗಳು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೋಂದಣಿಯಲ್ಲಿ ವಿನಾಯಿತಿಗಳನ್ನು ಪಡೆಯುತ್ತಾರೆ ಎಂದು ಅವರು ಹೇಳಿದ್ದಾರೆ.

ದಾಖಲಾತಿ ಸಮಯದಲ್ಲಿ ಸಂಗ್ರಹಿಸಲಾದ ಪ್ರತಿಯೊಂದು ಡೇಟಾವು ದೃಢವಾದ, ಸುಸ್ಥಾಪಿತವಾದ ಡೇಟಾ ಗುಣಮಟ್ಟ ಪರಿಶೀಲನೆ ಕಾರ್ಯವಿಧಾನದ ಮೂಲಕ ಹಾದುಹೋಗಬೇಕು ಎಂದು ಅವರು ಹೇಳಿದರು.

ಆಧಾರ್ ಡೇಟಾಬೇಸ್‌ನ ನಿಖರತೆಯನ್ನು ಸುಧಾರಿಸಲು ಯುಐಡಿಎಐ ನೋಂದಣಿ ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ ಎಂದು ಸಚಿವರು ಹೇಳಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top