News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2013ಕ್ಕೆ ಹೋಲಿಸಿದರೆ ಪ್ರಸ್ತುತ ಭಾರತದ ಆಟಿಕೆ ರಫ್ತು 6 ಪಟ್ಟು ವೃದ್ಧಿ

ನವದೆಹಲಿ: ಸರ್ಕಾರದ ಅಂಕಿಅಂಶಗಳ ಪ್ರಕಾರ ಈ ಹಣಕಾಸು ವರ್ಷದಲ್ಲಿ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಭಾರತದ ಆಟಿಕೆ ರಫ್ತು 1,017 ಕೋಟಿ ರೂಪಾಯಿ ತಲುಪಿದೆ. 2021-22ರಲ್ಲಿ ರಫ್ತು 2,601 ಕೋಟಿ ರೂಪಾಯಿ ತಲುಪಿತ್ತು.

“ಮೇಡ್ ಇನ್ ಇಂಡಿಯಾ’ ಆಟಿಕೆಗಳು ಜಾಗತಿಕ ಮಾರುಕಟ್ಟೆಗಳನ್ನು ತಲುಪುವುದನ್ನು ಮುಂದುವರೆಸಿವೆ! ಭಾರತದ ಆಟಿಕೆ ರಫ್ತು 2013 ರ ಇದೇ ಅವಧಿಗೆ ಹೋಲಿಸಿದರೆ ಏಪ್ರಿಲ್-ಡಿಸೆಂಬರ್ 2022 ರಲ್ಲಿ 6 ಪಟ್ಟು ಹೆಚ್ಚಾಗಿದೆ” ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಭಾನುವಾರ ಟ್ವೀಟ್ ಮಾಡಿದ್ದಾರೆ.

ದೇಶದಿಂದ ಆಟಿಕೆಗಳ ದೇಶೀಯ ಉತ್ಪಾದನೆ ಮತ್ತು ರಫ್ತುಗಳನ್ನು ಉತ್ತೇಜಿಸಲು ಮತ್ತು ಕಡಿಮೆ ಗುಣಮಟ್ಟದ ಚೀನಾದಂತಹ ದೇಶಗಳಿಂದ ಆಮದುಗಳನ್ನು ಕಡಿಮೆ ಮಾಡಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸಚಿವರು ಹೇಳಿದ್ದಾರೆ.

2018-19ರಲ್ಲಿ 2,960 ಕೋಟಿ ರೂಪಾಯಿ ಮೌಲ್ಯದ ಆಟಿಕೆಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದೆ. ಮೋದಿ ಸರ್ಕಾರ ‘ಸ್ಥಳೀಯಕ್ಕಾಗಿ ಧ್ವನಿ’ ಧ್ಯೇಯದೊಂದಿಗೆ ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದ ಮೇಲೆ ವಿನ್ಯಾಸಗೊಳಿಸಲಾದ ಸ್ಥಳೀಯ ಆಟಿಕೆಗಳನ್ನು ಉತ್ತೇಜಿಸಲು ಸರ್ಕಾವು ಹಲವಾರು ಕ್ರಮಗಳನ್ನು ತೆಗೆದುಕೊಂಡಿತು. ಇದರಿಂದ 2021-22ರಲ್ಲಿ ಭಾರತದಲ್ಲಿ ಆಟಿಕೆಗಳ ಒಟ್ಟಾರೆ ಆಮದು ಶೇಕಡಾ 70 ರಷ್ಟು ಕಡಿಮೆಯಾಗಿ 870 ಕೋಟಿ ರೂಪಾಯಿಗೆ ಬಂದಿತು.

ಫೆಬ್ರವರಿ 2020 ರಲ್ಲಿ, ಆಮದುಗಳನ್ನು ನಿರುತ್ಸಾಹಗೊಳಿಸುವ ಉದ್ದೇಶದಿಂದ ಆಟಿಕೆಗಳ ಮೇಲಿನ ಆಮದು ಸುಂಕವನ್ನು ಶೇಕಡಾ 20 ರಿಂದ 60 ಕ್ಕೆ ಮತ್ತು ಈಗ ಈ ವರ್ಷ ಶೇಕಡಾ 70 ಕ್ಕೆ ಏರಿಸಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top