ನವದೆಹಲಿ: ಇಂದು ಜಗತ್ತಿನಾದ್ಯಂತ ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತಿದೆ. ರೇಡಿಯೊದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ಮಾಧ್ಯಮಗಳಲ್ಲಿ ಅರಿವು ಮೂಡಿಸಲು ಮತ್ತು ರೇಡಿಯೊ ಮೂಲಕ ಮಾಹಿತಿಗೆ ಪ್ರವೇಶವನ್ನು ಉತ್ತೇಜಿಸುವುದನ್ನು ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ರೇಡಿಯೋ ದಿನದ 12 ನೇ ಆವೃತ್ತಿಯ ಥೀಮ್ ‘ರೇಡಿಯೋ ಮತ್ತು ಶಾಂತಿ’ ಎಂಬುದಾಗಿದೆ. ಇದು ರೇಡಿಯೊದ ಅನನ್ಯ ಶಕ್ತಿಯನ್ನು ನೆನಪಿಸಿಕೊಳ್ಳುವ ದಿನವಾಗಿದೆ, ಇದು ಜಗತ್ತಿನ ಮೂಲೆ ಮೂಲೆಯಿಂದ ಜನರನ್ನು ಒಟ್ಟುಗೂಡಿಸುತ್ತದೆ.
ವೀಡಿಯೋ ಸಂದೇಶದಲ್ಲಿ ಪ್ರಸಾರ ಭಾರತಿ ಸಿಇಒ ಗೌರವ್ ದ್ವಿವೇದಿ ಮಾತನಾಡಿ, ರೇಡಿಯೋ ಸಮೂಹ ಮಾಧ್ಯಮವಾಗಿ ಜಗತ್ತಿನ ಜನಜೀವನವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ವಿಶ್ವ ರೇಡಿಯೋ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.
“ವಿಶ್ವ ರೇಡಿಯೋ ದಿನದ ವಿಶೇಷ ಸಂದರ್ಭದಲ್ಲಿ ಎಲ್ಲಾ ರೇಡಿಯೋ ಕೇಳುಗರಿಗೆ, RJ ಗಳಿಗೆ ಮತ್ತು ಪ್ರಸಾರ ಪರಿಸರ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲರಿಗೂ ಶುಭಾಶಯಗಳು. ರೇಡಿಯೋ ನವೀನ ಕಾರ್ಯಕ್ರಮಗಳ ಮೂಲಕ ಮತ್ತು ಮಾನವ ಸೃಜನಶೀಲತೆಯನ್ನು ಪ್ರದರ್ಶಿಸುವ ಮೂಲಕ ಜೀವನವನ್ನು ಬೆಳಗಿಸುತ್ತಿರಲಿ” ಎಂದು ಟ್ವಿಟ್ ಮಾಡಿದ್ದಾರೆ.
Greetings to all radio listeners, RJs and all others associated with the broadcasting eco-system on the special occasion of World Radio Day. May the radio keep brightening lives through innovative programmes and showcasing human creativity.
— Narendra Modi (@narendramodi) February 13, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.