News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಾಂಗ್ಲಾದ ಢಾಕಾ ತಲುಪಿದ ಗಂಗಾ ವಿಲಾಸ್‌ ರಿವರ್‌ ಕ್ರೂಸ್

ನವದೆಹಲಿ: ವಿಶ್ವದ ಅತಿ ಉದ್ದದ ರಿವರ್ ಕ್ರೂಸ್ ಗಂಗಾ ವಿಲಾಸ್‌ ಶುಕ್ರವಾರ ಬಾಂಗ್ಲಾದೇಶದ ರಾಜಧಾನಿ ಢಾಕಾವನ್ನು ತಲುಪಿದೆ. ಅದರಲ್ಲಿ ಸದಸ್ಯರು ತಮ್ಮ ಪ್ರಯಾಣದ 32 ನೇ ದಿನವನ್ನು ಢಾಕಾ ಮತ್ತು ಹತ್ತಿರದ ಪ್ರ ಕೆಲವು ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸುವ ಮೂಲಕ ಕಳೆದಿದ್ದಾರೆ.

ಶುಕ್ರವಾರ ಕ್ರೂಸ್‌ನಲ್ಲಿ ಪ್ರವಾಸಿಗರು 15 ನೇ ಶತಮಾನದಲ್ಲಿ ಬಂಗಾಳದ ರಾಜಧಾನಿಯಾಗಿದ್ದ ಸೋನಾರ್ಗಾಂವ್ ಬಳಿಯ ಪನಮ್ ನಗರದ ಅವಶೇಷಗಳಿಗೆ ಭೇಟಿ ನೀಡಿದ್ದಾರೆ.  ಪನಮ್ ನಗರದಲ್ಲಿ ಅಸ್ತಿತ್ವದಲ್ಲಿರುವ ಎರಡು ಅಂತಸ್ತಿನ ಕಟ್ಟಡಗಳು 19 ನೇ ಶತಮಾನದವು. ಪನಮ್ ನಗರದ ಎರಡು ಅಂತಸ್ತಿನ ಅವಶೇಷಗಳು ಯುರೋಪಿಯನ್ ವಾಸ್ತುಶೈಲಿಯ ಪ್ರಭಾವವನ್ನು ಪ್ರತಿಬಿಂಬಿಸುತ್ತವೆ. ಪನಮ್ ನಗರವು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತಲೇ ಬರುತ್ತಿದೆ.

ಪ್ರವಾಸಿಗರು ಸೋನಾರ್ಗಾಂವ್ ಜಾನಪದ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ ಶತಮಾನಗಳಷ್ಟು ಹಳೆಯದಾದ ಪ್ರತಿಮೆಗಳು, ಮರದ ಶಿಲ್ಪಗಳು ಮತ್ತು ಇತರ ಕಲಾಕೃತಿಗಳನ್ನು ವೀಕ್ಷಿಸಿದ್ದಾರೆ. ಅಲ್ಲದೇ ಸೋನಾರ್‌ಗಾಂವ್‌ನಲ್ಲಿರುವ 16 ನೇ ಶತಮಾನದ ಗೋಲ್ಡಿ ಮಸೀದಿಗೆ ಭೇಟಿ ನೀಡಿದ್ದಾಋಎ.

ಕ್ರೂಸ್ ಪ್ರವಾಸಿಗರು ಹಳೆಯ ಢಾಕಾ ಪ್ರದೇಶದಲ್ಲಿ ಸಾಂಪ್ರದಾಯಿಕ ಢಾಕಾ ಆಹಾರದ ರುಚಿಯನ್ನು ಸವಿದಿದ್ದಾರೆ ಮತ್ತು ನಗರದ ಕೆಲವು ಐತಿಹಾಸಿಕ ಕಟ್ಟಡಗಳಾದ ಹೈಕೋರ್ಟ್ ಕಟ್ಟಡ, ಢಾಕಾ ವಿಶ್ವವಿದ್ಯಾಲಯದ ಕರ್ಜನ್ ಹಾಲ್, ಭಾಷಾ ಚಳವಳಿಯ ಹುತಾತ್ಮರನ್ನು ಗೌರವಿಸಲು ನಿರ್ಮಿಸಲಾದ ಸ್ಮಾರಕ ಮತ್ತು ಐತಿಹಾಸಿಕ ಢಾಕೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಅಲ್ಲದೇ ಬಾಂಗ್ಲಾದೇಶದ ಆಧುನಿಕ ವಾಸ್ತುಶಿಲ್ಪದ ಒಂದು ಸೊಗಸಾದ ಉದಾಹರಣೆ ಎಂದು ಪರಿಗಣಿಸಲಾದ ಸಂಸತ್ತಿನ ಕಟ್ಟಡಕ್ಕೆ ಭೇಟಿ ನೀಡಿದ್ದಾರೆ. ಪ್ರವಾಸಿಗರು ನಾರಾಯಣಗಂಜ್‌ನ ಬೌದ್ದರ್‌ಬಜಾರ್‌ನಲ್ಲಿ ರಾತ್ರಿ ಕಳೆದಿದ್ದಾರೆ ಮತ್ತು ಶನಿವಾರ ಬೆಳಿಗ್ಗೆ ತಮ್ಮ ಮುಂದಿನ ತಾಣವಾದ ಅರಿಚಾಕ್ಕೆ ಪ್ರಯಾಣಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top