News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

40,000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ಅಪರಿಚಿತ ವಸ್ತು ಹೊಡೆದುರುಳಿಸಿದ ಅಮೆರಿಕ

ವಾಷಿಂಗ್ಟನ್: ಚೀನಾದ ಬೇಹುಗಾರಿಕಾ ಬಲೂನ್ ಅನ್ನು ಉರುಳಿಸಿದ ಆರು ದಿನಗಳ ನಂತರ ಅಲಾಸ್ಕಾದ ಮೇಲೆ ಹಾರಾಡುತ್ತಿದ್ದ ಅಪರಿಚಿತ ವಸ್ತುವನ್ನು ಯುಎಸ್ ಫೈಟರ್ ಜೆಟ್ ಶುಕ್ರವಾರ ಹೊಡೆದುರುಳಿಸಿದೆ ಎಂದು ಶ್ವೇತಭವನ ತಿಳಿಸಿದೆ.

ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಆದೇಶದ ಮೇರೆಗೆ ಸೇನಾ ಫೈಟರ್ ಕಾರ್ಯಾಚರಣೆ ನಡೆಸಿ ಇದನ್ನು ಹೊಡೆದುರುಳಿಸಿದೆ ಎಂದು ಶ್ವೇತ ಭವನ ತಿಳಿಸಿದೆ.

ಶ್ವೇತ ಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬೇ ಈ ಬಗ್ಗೆ ಮಾಹಿತಿ ನೀಡಿದ್ದು, ಸುಮಾರು 40,000 ಅಡಿಗಳ ಎತ್ತರದಲ್ಲಿ ಹಾರಾಡುತ್ತಿದ್ದ ಆ ಅಪರಿಚಿತ ವಸ್ತು, ಪ್ರಯಾಣಿಕ ವಿಮಾನಗಳಿಗೆ ಅಪಾಯವೊಡ್ಡುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಅದನ್ನು ಹೊಡೆದುರುಳಿಸಲಾಗಿದೆ.  ಅದು ಕಣ್ಗಾವಲಿನ ಕೆಲಸದಲ್ಲಿತ್ತು ಎಂಬ ಕಾರಣಕ್ಕಾಗಿ ಹೊಡೆದುರುಳಿಸಿಲ್ಲ ಎಂದು ತಿಳಿಸಿದ್ದಾರೆ.

ಆ ಅಪರಿಚಿತ ವಸ್ತು ಸಣ್ಣ ಕಾರಿನಷ್ಟು ದೊಡ್ಡದಿತ್ತು, ಆದರೆ ಅದು ಚೀನಾದ ಶಂಕಿತ ಸ್ಪೈ ಬಲೂನ್ ಗಿಂತಲೂ ಕಡಿಮೆ ಗಾತ್ರದ್ದಾಗಿತ್ತು ಎಂದಿದ್ದಾರೆ.

 ಪೆಂಟಗನ್ ಆ ಅಪರಿಚಿತ ವಸ್ತುವಿನ ವಿವರಣೆ ನೀಡಲು ನಿರಾಕರಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top