ಮೆಲ್ಬೋರ್ನ್: ಚೀನಾ ನಿರ್ಮಿತ ಕ್ಯಾಮೆರಾಗಳನ್ನು ಆಸ್ಟ್ರೇಲಿಯಾ ಸರ್ಕಾರ ತನ್ನ ಕಚೇರಿಗಳಿಂದ ತೆಗೆದುಹಾಕುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.
ಆಸ್ಟ್ರೇಲಿಯಾ ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಬೇಹುಗಾರಿಕೆಯ ಆತಂಕದ ಹಿನ್ನೆಲೆಯಲ್ಲಿ ಸರ್ಕಾರದ ಕಚೇರಿಗಳಲ್ಲಿರುವ ಚೀನಾ ನಿರ್ಮಿತ ಕ್ಯಾಮೆರಾಗಳನ್ನು ತೆಗೆದು ಹಾಕಲಾಗುತ್ತಿದೆ ಎಂದಿದ್ದಾರೆ.
ಅಲ್ಲಿನ ವಿರೋಧ ಪಕ್ಷದ ಲಿಬರಲ್ ಪಾರ್ಟಿಯ ಸೆನೆಟರ್ ಜೇಮ್ಸ್ ಪ್ಯಾಟರ್ಸನ್ ಅವರು ಚೀನಾ ಕ್ಯಾಮೆರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಆಸ್ಟ್ರೇಲಿಯಾದ ಸರ್ಕಾರಿ ಆವರಣದಲ್ಲಿ ಬಳಕೆಯಲ್ಲಿರುವ ಚೀನಾ-ನಿರ್ಮಿತ ಭದ್ರತಾ ಸಾಧನಗಳ ಲೆಕ್ಕಪರಿಶೋಧನೆಯನ್ನು ನಡೆಸಿರುವುದಾಗಿ ಹೇಳಿದ್ದಾರೆ.
ಬುಧವಾರ ರೇಡಿಯೊ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ಯಾಟರ್ಸನ್ ಅವರು, ಚೀನೀ ಸರ್ಕಾರಿ ಸ್ವಾಮ್ಯದ ಉದ್ಯಮಗಳಾದ ಹಿಕ್ವಿಷನ್ ಮತ್ತು ದಹುವಾ ತಯಾರಿಸಿದ ಕ್ಯಾಮೆರಾಗಳು, ಪ್ರವೇಶ ನಿಯಂತ್ರಣ ವ್ಯವಸ್ಥೆಗಳು ಮತ್ತು ಇಂಟರ್‌ಕಾಮ್‌ಗಳು ಸೇರಿದಂತೆ 913 ಸಾಧನಗಳನ್ನು ಆಡಿಟ್ ಮಾಡಲಾಗಿದೆ. ಈ ಕಂಪನಿಗಳು ಚೀನೀ ಕಮ್ಯುನಿಸ್ಟ್ ಪಕ್ಷದೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿವೆ ಮತ್ತು ಅವು ಚೀನಾದ ರಾಷ್ಟ್ರೀಯ ಗುಪ್ತಚರ ಕಾನೂನುಗಳಿಗೆ ಒಳಪಟ್ಟಿರುತ್ತವೆ ಎಂದಿದ್ದಾರೆ.
ಎಲ್ಲಾ ಚೀನೀ ಕಂಪನಿಗಳು ಮತ್ತು ವ್ಯಕ್ತಿಗಳು ವಿನಂತಿಸಿದಲ್ಲಿ ಚೀನೀ ಗುಪ್ತಚರ ಸಂಸ್ಥೆಗಳೊಂದಿಗೆ ರಹಸ್ಯವಾಗಿ ಸಹಕರಿಸಲು ಅವರಿಗೆ ಕಾನೂನು ಇದೆ. ಯುಕೆ ಕೂಡ ಸೂಕ್ಷ್ಮ ಸೈಟ್‌ಗಳಿಂದ ಚೀನಾದ ಕಣ್ಗಾವಲು ಕ್ಯಾಮೆರಾಗಳನ್ನು ನಿಷೇಧಿಸಿದೆ.
ಇತ್ತೀಚಿಗೆ ಅಮೆರಿಕಾವು ಚೀನಾದ ಬೇಹುಗಾರಿಕೆ ಬಲೂನ್‌ಗಳನ್ನು ಪತ್ತೆ ಹಚ್ಚಿ ಹೊಡೆದಿರುವುದಾಗಿ ಹೇಳಿಕೊಂಡಿದೆ. ಹೀಗಾಗಿ ಸಹಜವಾಗಿಯೇ ಚೀನಾದ ಮೇಲೆ ವಿವಿಧ ದೇಶಗಳಿಗೆ ಅನುಮಾನ ಆರಂಭವಾಗಿದ್ದು, ಚೀನಿ ಸಾಧನಗಳ ಮೇಲೆ ಕಣ್ಣಿಡುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.