News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದಲ್ಲಿ ಟ್ವಿಟರ್‌ ಬ್ಲೂ ಟಿಕ್‌ ವೆರಿಫಿಕೇಶನ್‌ ಆರಂಭ

ನವದೆಹಲಿ: ಟ್ವಿಟರ್‌ ಬ್ಲೂ ಟಿಕ್ ವೆರಿಫಿಕೇಶನ್‌ ಅನ್ನು ಭಾರತದಲ್ಲಿ ಆರಂಭಿಸಿದೆ. ವೆಬ್‌ನಲ್ಲಿ ವೆರಿಫೈಡ್ ಬ್ಲೂ ಸೇವೆಗೆ ತಿಂಗಳಿಗೆ ರೂ 650 ಮತ್ತು ಆಂಡ್ರಾಯ್ಡ್ ಹಾಗೂ ಐಒಎಸ್ ಮೊಬೈಲ್ ಸಾಧನಗಳಲ್ಲಿ ರೂ 900 ಶುಲ್ಕ ವಿಧಿಸಲಾಗಿದೆ.

ಟ್ವಿಟರ್ ಬ್ಲೂ ಈಗ ಭಾರತ ಮಾತ್ರವಲ್ಲೇ ಬ್ರೆಜಿಲ್ ಮತ್ತು ಇಂಡೋನೇಷ್ಯಾಕ್ಕೂ ವಿಸ್ತರಿಸಲಾಗಿದೆ.

ಎಲೋನ್ ಮಸ್ಕ್ ನಡೆಸುತ್ತಿರುವ ಟ್ವಿಟರ್ ಭಾರತದಲ್ಲಿ ವರ್ಷಕ್ಕೆ 6,800 ರೂಪಾಯಿಗಳ ರಿಯಾಯಿತಿ  ಯೋಜನೆಯನ್ನು ಸಹ ನೀಡುತ್ತಿದೆ, ಇದರಿಂದ ತಿಂಗಳಿಗೆ ಸರಿಸುಮಾರು 566.67 ರೂಪಾಯಿ ಆಗುತ್ತದೆ.

ಟ್ವಿಟರ್ ಬ್ಲೂ ವೆರಿಫಿಕೇಶನ್‌ ಈಗ ಭಾರತ ಸೇರಿದಂತೆ ಯುಎಸ್, ಕೆನಡಾ, ಜಪಾನ್, ಯುಕೆ ಮತ್ತು ಸೌದಿ ಅರೇಬಿಯಾ ಸೇರಿದಂತೆ 15 ಜಾಗತಿಕ ಮಾರುಕಟ್ಟೆಗಳಲ್ಲಿ ಲಭ್ಯವಿದೆ.

ಬ್ಲೂಟಿಕ್ ಪಡೆದ ಖಾತೆಗಳಿಗಾಗಿ ಟ್ವಿಟರ್‌ನಿಂದ ಹೊಸ ಫೀಚರ್‌ಗಳು ಸಿಗಲಿವೆ. ಇದುವರೆಗೆ ಟ್ವಿಟರ್ ನಲ್ಲಿ ಸಣ್ಣ ವಿಡಿಯೋ ತುಣುಕನ್ನು ಮಾತ್ರ ಪೋಸ್ಟ್ ಮಾಡಲ ಅವಕಾಶವಿತ್ತು, ಆದರೆ ಬ್ಲೂಟಿಕ್ ಸೇವೆ ಪಡೆದವರು ಟ್ವಿಟರ್‌ಗೆ ಉದ್ದದ ವಿಡಿಯೋಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುತ್ತದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top