News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಳೆದ 3 ವರ್ಷಗಳಲ್ಲಿ ಮಾನವ ರಹಿತ ಲೆವೆಲ್ ಕ್ರಾಸಿಂಗ್‌ಗಳಲ್ಲಿ ರೈಲು ಅಪಘಾತ ಸಂಭವಿಸಿಲ್ಲ: ಕೇಂದ್ರ

ನವದೆಹಲಿ: ಸತತ ಪ್ರಯತ್ನದಿಂದ ಕಳೆದ ಮೂರು ವರ್ಷಗಳಲ್ಲಿ ಮಾನವ ರಹಿತ ಲೆವೆಲ್ ಕ್ರಾಸಿಂಗ್‌ಗಳಲ್ಲಿ ಯಾವುದೇ ರೈಲು ಅಪಘಾತಗಳು ನಡೆದಿಲ್ಲ ಎಂದು ಲೋಕಸಭೆಗೆ ತಿಳಿಸಲಾಗಿದೆ.

ಪ್ರಯಾಣಿಕರ ರೈಲು ಮಾರ್ಗಗಳಲ್ಲಿನ ಭಾರತೀಯ ರೈಲ್ವೆಯ ಬ್ರಾಡ್ ಗೇಜ್ (ಬಿಜಿ) ನೆಟ್‌ವರ್ಕ್‌ನಲ್ಲಿರುವ ಎಲ್ಲಾ ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು (ಯುಎಂಎಲ್‌ಸಿ)  31 ಜನವರಿ 2019 ರೊಳಗೆ ತೆಗೆದುಹಾಕಲಾಗಿದೆ ಎಂದಿದೆ.

ಪ್ರಸ್ತುತ ಮೀಟರ್ ಗೇಜ್ (MG) ಮತ್ತು ನ್ಯಾರೋ ಗೇಜ್ (NG) ವಿಭಾಗಗಳಲ್ಲಿ ಕೇವಲ 751 ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳು ಅಸ್ತಿತ್ವದಲ್ಲಿವೆ, ಆ ವಿಭಾಗಗಳ ಗೇಜ್ ಪರಿವರ್ತನೆಯ ಸಮಯದಲ್ಲಿ ಅವುಗಳನ್ನು ತೆಗೆದುಹಾಕಲು ಯೋಜಿಸಲಾಗಿದೆ.

ದೇಶದ ಮಾನವರಹಿತ ಲೆವೆಲ್ ಕ್ರಾಸಿಂಗ್‌ ಗಳಲ್ಲಿ ರೈಲು ಅಪಘಾತಗಳನ್ನು ಕಡಿಮೆ ಮಾಡಲು ರೈಲ್ವೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪ್ರಸ್ತುತ, ಹೆಚ್ಚಿನ ರೈಲು/ರಸ್ತೆ ವಾಹನಗಳ ದಟ್ಟಣೆಯನ್ನು ಹೊಂದಿರುವ ಲೆವೆಲ್ ಕ್ರಾಸಿಂಗ್‌ಗಳ ಸುರಕ್ಷತೆಯನ್ನು ಹೆಚ್ಚಿಸಲು ಅವುಗಳನ್ನು ಮಾನವಸಹಿತಗೊಳಿಸಲಾಗಿದೆ ಅಥವಾ ಸಿಗ್ನಲ್‌ಗಳೊಂದಿಗೆ ಇಂಟರ್‌ಲಾಕ್ ಮಾಡಲಾಗಿದೆ.

ಲೆವೆಲ್ ಕ್ರಾಸಿಂಗ್‌ಗಳಲ್ಲಿ ಮೂಲ ಸೌಕರ್ಯಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕಾಲಕಾಲಕ್ಕೆ ಸೂಚನೆಗಳು ಮತ್ತು ತಪಾಸಣೆ ಗಳನ್ನು ಪ್ರಾರಂಭಿಸಲಾಗುತ್ತಿದೆ. ಫಲಕಗಳು, ರಸ್ತೆ ಎಚ್ಚರಿಕೆ ಫಲಕಗಳು, ಸ್ಪೀಡ್ ಬ್ರೇಕರ್‌ಗಳನ್ನು ಹಾಕಲಾಗುತ್ತಿದೆ.

ಇದಲ್ಲದೆ, ಲೆವೆಲ್ ಕ್ರಾಸಿಂಗ್‌ಗಳಲ್ಲಿ  ಸುರಕ್ಷತಾ ಪ್ರಜ್ಞೆಯನ್ನು ಮೂಡಿಸಲು ಸಾರ್ವಜನಿಕ ಜಾಗೃತಿ ಅಭಿಯಾನಗಳು/ಸುರಕ್ಷತಾ ಘೋಷಣೆಗಳನ್ನು ಕೈಗೊಳ್ಳಲಾಗುತ್ತಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top